ಮಂಗಳೂರು,ಅ.9 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾತೆ ಮೇರಿ ಅಮ್ಮನ ಜನ್ಮದಿನ, ಮೊಂತಿ ಫೆಸ್ತ್( ತೆನೆ ಹಬ್ಬ)ನ್ನು ಕ್ಯಾಥೋಲಿಕ್ ಕ್ರೈಸ್ತ ಬಾಂಧವರು ಸೋಮವಾರ ಭಕ್ತಿ ಭಾವದಿಂದ ಆಚರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚರ್ಚ್ ಗಳಲ್ಲಿ ಭತ್ತದ ತೆನೆಯನ್ನು ಪವಿತ್ರೀಕರಣ ಮಾಡಿ ವಿತರಿಸಲಾಯಿತು. ಮೇರಿ ಮಾತೆಗೆ ಪುಷ್ಪಾರ್ಚನೆ, ದಿವ್ಯ ಬಲಿಪೂಜೆ ನಡೆಯಿತು.
ಮಂಗಳೂರಿನ ಮಿಲಾಗ್ರಿಸ್, ರೊಸಾರಿಯೋ, ಬೆಂದೂರ್‌ವೆಲ್, ಉರ್ವ ಲೇಡಿಹಿಲ್, ಕೂಳೂರು, ಅಶೋಕ ನಗರ, ಕುಲಶೇಖರ ಸೇರಿದಂತೆ ಪ್ರಮುಖ ಚರ್ಚ್‌ಗಳಲ್ಲಿ ಹಬ್ಬದ ಅಂಗವಾಗಿ ನಡೆದ ಬಲಿಪೂಜೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಭಾಗವಹಿಸಿದ್ದರು.