ಮಂಗಳೂರು, ಸೆ. 09 : ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ಮಂಗಳೂರಿನ ರೋಹನ್ ಕಾರ್ಪೊರೇಷನ್, ತನ್ನ ಮಹತ್ವಾಕಾಂಕ್ಷಿ ಯೋಜನೆ – ರೋಹನ್ ಮರೀನಾ ಒನ್ ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ಮಂಗಳೂರಿನ ಸುರತ್ಕಲ್ ಎನ್ ಐ ಟಿ ಕೆ ಬೀಚ್ ರಸ್ತೆಯಲ್ಲಿರುವ ರೋಹನ್ ಮರೀನಾ ಒನ್, ಒಟ್ಟು 8.2 ಎಕರೆ ವಿಸ್ತರಿಸಿದ್ದು ಮತ್ತು ಕಡಲ ತೀರದಲ್ಲಿ ಐಷಾರಾಮಿ ಜೀವನಶೈಲಿಯನ್ನು ನೀಡಬಲ್ಲ 433 ಅಲ್ಟ್ರಾ-ಲಕ್ಷುರಿ ಅಪಾರ್ಟ್ಮೆಂಟ್ ಗಳನ್ನು ಹೊಂದಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು ಒಸಿಯನ್ ಪರ್ಲ್ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಭಾರತದ ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ಒಂದು ವಿನೂತನ ಪ್ರಯೋಗವಾಗಿರುವ ರೋಹನ್ ಮರೀನಾ ಒನ್, ಅರಬ್ಬಿ ಸಮುದ್ರದ ಸುಂದರ ಕಡಲತೀರದ ದೃಶ್ಯವು ಪ್ರತಿಯೊಂದು ಅಪಾರ್ಟ್‌ಮೆಂಟ್ ಕಾಣಿಸುವಂತೆ ಇರುವ ಉತ್ಕೃಷ್ಟ ವಸತಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ, 39 ಮಹಡಿಗಳಿರುವ “ದಿ ರಿಟ್ರೀಟ್” ಮತ್ತು 47 ಮಹಡಿಗಳಿರುವ “ದಿ ರಿಸಾರ್ಟ್” ಎಂಬ ಎರಡು ಟವರ್ ಗಳಿದ್ದು, ರೋಹನ್ ಮರೀನಾ ಒನ್ ಅನ್ನು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೇ ಹೊಸ ಮೈಲಿಗಲ್ಲಾಗಿ ನಿಲ್ಲುವಂತೆ ಮಾಡಿದೆ 39 ಮಹಡಿಗಳ ಈ ಟವರ್ ನಲ್ಲಿ 2, 3 ಮತ್ತು 4 BHK ಅಪಾರ್ಟ್ಮೆಂಟ್ ಗಳಿವೆ. ಪ್ರತಿಯೊಂದು ಮನೆಯನ್ನು ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ರೂಪಿಸಿದ್ದು, ಇಲ್ಲಿನ ನಿವಾಸಿಗಳಿಗೆ ಐಷಾರಾಮಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನೀಡುತ್ತದೆ ಎಂದರು.
ರೋಹನ್ ಕಾರ್ಪೊರೇಷನ್ ಎಂ.ಡಿ, ರೋಹನ್ ಮೊಂತೇರೋ ಅವರು ಮಾತಾನಾಡಿ, ಐಷಾರಾಮಿ ಜೀವನಶೈಲಿಯೊಂದಿಗೆ, ಕಡಲತೀರದ ಪ್ರಶಾಂತತೆ ಮತ್ತು ವಿಶ್ವದರ್ಜೆಯ ಸವಲತ್ತುಗಳ ಸಮ್ಮಿಲನವಾಗಿ “ರೋಹನ್ ಮರೀನಾ ಒನ್” ಅನ್ನು ನಾವು ಪರಿಚಯಿಸುತ್ತಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ. ರೋಹನ್ ಮರಿನಾ ಒನ್ ನಮ್ಮ ಕನಸಿನ ಯೋಜನೆ, ಮತ್ತು ಈ ಯೋಜನೆ ಕರಾವಳಿಯ ಜೀವನಕ್ಕೆ ಹೊಸ ಅರ್ಥವನ್ನು ನೀಡುಲು ನಮ್ಮ ಪ್ರಯತ್ನವಾಗಿದೆ. ಪ್ರತಿಯೊಂದು ಅಪಾರ್ಟ್‌ಮೆಂಟ್‌ನಿಂದಲೂ ಅರಬ್ಬಿ ಸಮುದ್ರದ ಆಹ್ಲಾದಕರ ನೋಟ ದೊರಕುವುದು ದೇಶದಲ್ಲಿ ಇದೇ ಮೊದಲು. ಪ್ರತಿದಿನ ಪ್ರಕೃತಿಯ ಅದ್ಭುತ ನೋಟದೊಂದಿಗೆ ದಿನವನ್ನು ಆರಂಭಿಸುವ ಅವಕಾಶವನ್ನು ನೀಡುತ್ತಿರುವುದು ಮಂಗಳೂರು ನಗರಕ್ಕೆ ನಾವು ನೀಡುವ ಗೌರವ ಮತ್ತು ನಮ್ಮ ಕರಾವಳಿಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜನರಲ್ ಮ್ಯಾನೇಜರ್ ಸುಮನ್ ಎಂ. ಡಿ., ಡಿಯೋನ್ ಮೊಂತೇರೋ ಉಪಸ್ಥಿತರಿದ್ದರು.