ಮಂಗಳೂರು, ಸೆ..09 : ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು ಹಾಗೂ ದೇವಾಡಿಗ ಸಂಘ ದುಬೈ ಇವರ ಆಶ್ರಯದಲ್ಲಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ದೇವಾಡಿಗ ಸಮಾಜ ಭವನದಲ್ಲಿ ಸೆ.07,ಆದಿತ್ಯವಾರ ನಡೆಯಿತು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರಾದ ಹರೀಶ್ ಶೇರಿಗಾರ್ ದುಬೈ ಅವರು ಸಮಾರಂಭದ ಉದ್ಘಾಟನೆಯನ್ನು ನೆರೆವೇರಿಸಿ ಮಾತಾಡಿದರು.
ಕಾರ್ಯಕ್ರಮದಲ್ಲಿ ದೇವಾಡಿಗರ ಸಂಘದ ಅಧ್ಯಕ್ಷರಾದ ಅಶೋಕ್ ಮೊಯಿಲಿ,ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಡಿ. ವೇದವ್ಯಾಸ್ ಕಾಮತ್ ಅವರು ಮಾತಾಡಿದರು.
ಶ್ರೀ ಬಾಬು ದೇವಾಂಗ ಅಂಬ್ಲಮೊಗರು ಇವರ ವತಿಯಿಂದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ನಡೆಯಿತು.
ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಇವರ ವತಿಯಿಂದ ಯುವ ಪ್ರತಿಭೆಗಳಿಗೆ ಬೆಳಿಗ್ಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.ಸಮಾರಂಭದಲ್ಲಿ ವಿಶ್ವ ದೇವಾಡಿಗ ಮಹಾಮಂಡಲ ಮುಂಬೈ ಇದರ ಅಧ್ಯಕ್ಷರು ಧರ್ಮಪಾಲ್ ಯು, ದೇವಾಡಿಗ, ದ. ಕ. ಜಿಲ್ಲಾ ಘಟಕ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರು ಸಿ. ಎ. ಶಾಂತಾರಾಮ್ ಶೆಟ್ಟಿ, ಮಂಗಳೂರು ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಾಜಿ ಅಧ್ಯಕ್ಷರು ಡಾ.ದೇವರಾಜ್ ಕೆ., ಮಂಗಳೂರು ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಬಾಬು ದೇವಾಡಿಗ ಆಂಗ್ಲಮೊಗರು,ದೇವಾಡಿಗ ಸಂಘ ದುಬೈ ಅಧ್ಯಕ್ಷರು ದಿನೇಶ್ ಕುಮಾರ್ ದೇವಾಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿಗಳು ರಘುರಾಮ್ ಆಲೂರು, ಮಂಗಳೂರು ಎ.ಜೆ. ಆಸ್ಪತ್ರೆ ಸರ್ಜಿಕಲ್ ಅಂಕೋಲಾಜಿ ವಿಭಾಗ ಸಲಹೆಗಾರರು ಡಾ. ವಿಶ್ವನಾಥ್ ಶೇರಿಗಾರ್, ಪಿಡಬ್ಲೂಡಿ ನಿವೃತ್ತ ಇಂಜಿನಿಯರ್ ಚೆನ್ನಪ್ಪ ಮೊಯಿಲಿ, ದೇವಾಡಿಗ ಸಂಘ ಉಪ್ಪಂದ ಗೌರವಾಧ್ಯಕ್ಷರು ಜನಾರ್ಧನ ಉಪ್ಪಂದ, ಉದ್ಯಮಿ ಲಯನ್ ಶುಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.