ಮಂಗಳೂರು ,ಸೆ. 23 : ಅಸ್ತ್ರ ಬ್ಯಾನರ್ ಅಡಿಯಲ್ಲಿ ಲಾಂಚುಲಾಲ್ ಕೆ.ಎಸ್ ನಿರ್ಮಾಣದಲ್ಲಿ ಮೂಡಿಬಂದ ಮೀರಾ ತುಳು ಸಿನಿಮಾ ಇದೀಗ ಟಾಕೀಸ್ OTT ಆಪ್ ನಲ್ಲಿ ಇದೇ ತಾರೀಖು 26 ನೇ, ಶುಕ್ರವಾರ ಬಿಡುಗಡೆಯಾಗುತ್ತಿದೆ ಎಂದು ಯತೀಶ್ ಪೂಜಾರಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀರಾ ಸ್ತಿ ಪ್ರಧಾನವಾದ ತುಳುವಿನ ಸಿನಿಮಾವಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ಮೀರಾ ಸಿನಿಮಾ ಇದೀಗ ಟಾಕೀಸ್ OTT ಆಪ್ ನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಇಶಿತಾ ಶೆಟ್ಟಿ,ಅರವಿಂದ್ ಬೋಳಾರ್, ಜೆ.ಪಿ ತೂಮಿನಾಡು, ಪ್ರಕಾಶ್ ತೂಮಿನಾಡು, ಸ್ವರಾಜ್ ಶೆಟ್ಟಿ, ಮಂಜು ರೈ ಮುಲೂರು, ರೂಪಾಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಬೇಬಿ ಲಕ್ಷ್ಯ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಅಶ್ವಥ್, ಛಾಯಾಗ್ರಹಣ ಅಜಯ್ ಕೆ.ಎಸ್, ಸಂಗೀತ ರಾಜು ಜಯಪುಕಾಶ್ , ಸಂಕಲನ ಜಾಬಿನ್ಸ್ ಸೆಬಾಸ್ನಿಯನ್ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಲಾಂಚುಲಾಲ್ ಕೆ.ಎಸ್, ನಿರ್ದೇಶಕ ಅಶ್ವಥ್, ಕಲಾವಿದ ಮಂಜು ರೈ ಮುಲೂರು, ಟಾಕೀಸ್ ಆಪ್ ಬಿಸಿನೆಸ್ ಹೆಡ್ ಸ್ಮಿತೇಶ್ ಎಸ್. ಬಾರ್ಯ, ಯೂನಿಟ್ ಮ್ಯಾನೇಜರ್ ವಿಕ್ರಮ್ ರಾವ್ ಉಪಸ್ಥಿತರಿದ್ದರು.