ಮಂಗಳೂರು ,ಅ.01 : : ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕುಡ್ಲದ ಪಿಲಿಪರ್ಬ 2025 – 4 ನೇ ಆವೃತ್ತಿ ಕಾರ್ಯಕ್ರಮ ನಗರದ ಕೇಂದ್ರ ಮೈದಾನದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮಕ್ಕೆ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಅವರು ಇತರ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು.
ನಂತರ ಮಾತಾಡಿದ ಅವರು. ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಕಲೆಯಾಗಿರುವ ಹುಲಿವೇಷ ಸ್ಪರ್ಧಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮಸಂಸ್ಕೃತಿಯ ಭಾಗವಾದ ಪಿಲಿ ಪರ್ಬ ದಲ್ಲಿ ಯುವ ಜನಾಂಗ ಹೆಚ್ಚು ಆಸಕ್ತಿ ವಹಿಸಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಪ್ರಸ್ತಾವಿಕ ಮಾತುಗಳನ್ನಾಡುತ್ತಾ,ನಾಲ್ಕನೇ ವರ್ಷದ ಪಿಲಿ ಪರ್ಬಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.
ಸಮಾರಂಭದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಉದ್ಯಮಿ ವಿಠಲ್, ಡಾ.ಅಣ್ಣಯ್ಯ ಕುಲಾಲ್,ಸಂಜಯ ಪ್ರಭು,ಸಂಘಟಕರಾದ ಗಿರಿಧರ ಶೆಟ್ಟಿ, ಯತೀಶ್ ಬೈಕಂಪಾಡಿ, ದಿವಾಕರ್, ,ನರೇಶ್ ಶೆಣೈ, ನರೇಶ್ ಪ್ರಭು,ಕಿರಣ್ ಶೆಟ್ಟಿ, ಚೇತನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.