ಮಂಗಳೂರು, ಅ. 13 : ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ 72 ನೇ ಅವತರಣೋತ್ಸವ ಅಮೃತೋತ್ಸವ 2025 ಕಾರ್ಯಕ್ರಮ ಅ. 11, ಶನಿವಾರ ನಡೆಯಿತು.
ಅಂದು ಬೆಳಗ್ಗೆ 8.45ಕ್ಕೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಅಮೃತ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿದರು. ಗಂಟೆ 9ರಿಂದ ಶ್ರೀ ಗುರು ಪಾದುಕಾ ಪೂಜೆ, ಸತ್ಸಂಗ, ಭಜನೆ, ಧ್ಯಾನ, ನಂತರ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಆರ್ಶಿವಾಚನ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಅಮೃತ ವಿಶ್ವವಿದ್ಯಾ ಪೀಠಂ ಕೊಚ್ಚಿ ಕ್ಯಾಂಪಸ್ ನ ಡೀನ್, ನಿರ್ದೇಶಕ ಡಾ| ಯು. ಕೃಷ್ಣ ಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತಾಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ, ವೇದವ್ಯಾಸ ಕಾಮತ್ ಅವರು ಕಾರ್ಯಕ್ರಮದಲ್ಲಿ ಮಾತಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ, ಅಮೃತ ವಿಶ್ವವಿದ್ಯಾ ಪೀಠಂ ಕೊಚ್ಚಿ ಕ್ಯಾಂಪಸ್ ನ ಡೀನ್, ನಿರ್ದೇಶಕ ಡಾ| ಯು. ಕೃಷ್ಣ ಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಡಾ| ವಸಂತಕುಮಾರ್ ಪೆರ್ಲ, ಖಜಾಂಚಿ ಯು. ರಾಮನಾಥ್ ನಾಯಕ, ಸದಸ್ಯರಾದ ಡಾ|ದೇವದಾಸಪುತ್ರನ್ ಮತ್ತಿತ್ತರರು ಉಪಸ್ಥಿತರಿದ್ದರು.
ರವಿ ಅಲೆವೂರಾಯ ಮತ್ತು ತಂಡದವರಿಂದ ಅಮೃತಮಯಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಬಳಿಕ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ, ಸಂಜೆ ಬಾಲಕೃಷ್ಣ ಭಟ್ ಮತ್ತು ಅವರ ತಂಡದಿಂದ ಶ್ರೀ ಚಕ್ರಪೂಜೆ ತಂತ್ರ ರತ್ನ ಬ್ರಹ್ಮಶ್ರೀ ಕಾರ್ಯಕ್ರಮ ಜರಗಿತು. ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್ ಸ್ವಾಗತಿಸಿದರು.