ಮಂಗಳೂರು,ನ.11: ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮಡಿಕಲ್ ಕಾಲೇಜು ಮತ್ತು ಗ್ಲೋಬಲ್ ಹೋಮಿಯೋಪಥಿಕ್ ಫೌಂಡೇಷನ್ ವತಿಯಿಂದ ಅಂತಾರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಎಕ್ಸ್ ಫ್ಲೋರಾ-2025’ ಕಾರ್ಯಕ್ರಮ ನ. 14ರಿಂದ 16ರ ವರೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ನೆನ್ನನ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ ಎಂದು ಸೋಮವಾರ ಫಾದರ್ ಮುಲ್ಲರ್ ಸೇವಾ ಸಂಸ್ಥೆ ನಿರ್ದೇಶಕರಾದ ರೆವರೆಂಡ್ ಫಾದರ್ ಫೌಸ್ಕಿನ್ ಲ್ಯೂಕಾಸ್ ಲೋಬೋ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ನ. 14ರಂದು ಮಧ್ಯಾಹ್ನ 12ಕ್ಕೆ ಉದ್ಘಾಟನೆ ನಡೆಯಲಿದ್ದು ರಾಜ್ಯದ ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಕಮಲ ಬಾಯಿ ಬಿ.. ದಕ್ಷಿಣ ಆಫ್ರಿಕಾದ ದರ್ಬನ್ ತಾಂತ್ರಿಕ ವಿಶ್ವವಿದ್ಯಾನಿಲಯದ ಹೋಮಿಯೋಪಥಿ ವಿಭಾಗ ಮುಖ್ಯಸ್ಥೆ ಡಾ| ಹ್ಯಾಶ್ಲಿ ರೋಸ್, ಯುಕೆ ಫಂಕ್ಷನಲ್ ಶಿಫ್ಟ್ ಕನ್ಸಲ್ಟಿಂಗ್ ನ ನಿರ್ದೇಶಕ ಡಾ| ಕೀಮ್ ಅಂಟೊನಿ ಭಾಗವಹಿಸಲಿದ್ದಾರೆ. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ| ಫಾವುಸ್ತಿನ್ ಲೂಕಸ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಕಮಲಾ ಬಾಯಿ ಬಿ. (KAS), ಮುಖ್ಯ ಆಡಳಿತಾಧಿಕಾರಿ, ಆಯುಷ್ ಇಲಾಖೆ ಹಾಗೂ ಡಾ. ಅಷ್ಟೇ ರಾಸ್ (ಡರ್ಬನ್ ತಂತ್ರಜ್ಞಾನ ವಿಶ್ವವಿದ್ಯಾಲಯ, ದಕ್ಷಿಣ ಆಫ್ರಿಕಾ) ಮತ್ತು ಡಾ. ಕಿಮ್ ಅಂಥೋನಿ ಜಾಬ್ (ಯುಕೆ) ಉಪಸ್ಥಿತರಿರಲಿದ್ದಾರೆ. ಕಾರ್ಯಗಾರದಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಭಾರತದಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದು, ದೇಶ ವಿದೇಶಗಳಿಂದ ಸುಮಾರ 1500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ದಿನಗಳಲ್ಲಿ ಸಂಜೆ 4.30ರಿಂದ 9ರವರೆಗೆ ಸಾಂಸ್ಕೃತಿಕ ಸಂಭ್ರಮ ಜರಗಲಿದೆ ಎಂದು ಹೇಳಿದರು.
ಫಾದರ್ ಮುಲ್ಕ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗ ವತಿಯಿಂದ ವಿಶ್ವ ಮಧುಮೇಹ ದಿನದ ಜಾಗೃತಿ ಅಭಿಯಾನ ನ 14ರಂದು ನಡೆಯಲಿದೆ. ನ. 13ರಿಂದ 15ರ ವರೆಗೆ ಮಕ್ಕಳ ದಿನಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ| ಫಾವು ಸ್ತಿನ್ ಲೂಕಸ್ ಲೋಬೋ, ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡೊವಾಲ್ದ್ ನಿಲೇಶ್ ಕ್ರಾಸ್ತಾ,ಎಫ್ ಎಂಎಚ್ ಪಿ ಡಿ ಆಡಳಿತಾಧಿಕಾರಿ ವಂ| ಡಾ| ನೆಲ್ಸನ್ ಡಿ. ಪಾಯಿಸ್, ಮಡಿಕಲ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ಜೋರ್ಜ್ ಜೀವನ್ ಸ್ವಿಕೇರಾ, , ಸಹಾಯಕ ಆಡಳಿತಾಧಿಕಾರಿ ವಂ| ವಿಲಿಯಂ ಡಿಸೋಜ, ಡೀನ್ ಡಾ| ಆಂಟನಿ ಡಿಸೋಜಾ, ಎಫ್ ಎಂ ಎಚ್ ಎಂಸಿ ಉಪಪ್ರಾಂಶುಪಾಲರಾದ ಡಾ| ವಿಲ್ದಾ ಮೀರಾ ಡಿ ಸೋಜಾ ಸೇರಿದಂತೆ ಸಿಬ್ಬಂದಿ, ವೈದ್ಯಾಧಿಕಾರಿಗಳು, ಮ್ಯಾನೇಜ್ಮೆಂಟ್ ಕಮಿಟಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.











