ಮಂಗಳೂರು, ,ನ. 14 : ನಗರದ ನಂತೂರು ಬಳಿ ಹುಂಡೈ ವೆರ್ನ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ. ದಾರಿ ಮಧ್ಯೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರಿಗೆ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.
ಬಳಿಕ ಪಾಲಿಕೆ ನೀರು ಸರಬರಾಜು ಟ್ಯಾಂಕರ್ ಸ್ಥಳಕ್ಕೆ ಆಗಮಿಸಿದ್ದು. ಟ್ಯಾಂಕರ್ ಸಿಬ್ಬಂದಿ ನೀರು ಹಾಯಿಸುವ ಮೂಲಕ ಕಾರಿನಲ್ಲಿ ಉಂಟಾದ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಘಟನೆ ನಡೆದ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದಾರೆ.











