ಮಂಗಳೂರು,ಡಿ. 15 : ಬಂಟ್ವಾಳ ತಾಲೂಕಿನ ಮುಡಿಪು ಬಳಿಯ ಇರಾ ನಿವಾಸಿ, ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ (68 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಡಿ.14ರಂದು ಭಾನುವಾರ ನಿಧನ ಹೊಂದಿದರು.
ಶ್ರೀಧರ ರೈ ಅವರು ಸುಂಕದಕಟ್ಟೆ ಮೇಳ, ಕೊಲ್ಲೂರು ಮೇಳ, ಭಗವತೀ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.ರಾಜ ವೇಷ, ಪುಂಡು ವೇಷ, ಬಣ್ಣದ ವೇಷಧಾರಿಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರು.











