ಮಂಗಳೂರು, ಡಿ.21 : ಮಂಗಳೂರಿನ ಶಕ್ತಿನಗರದಲ್ಲಿರುವ ರಮಾಶಕ್ತಿ ಮಿಷನ್ ನಲ್ಲಿ ಡಿ. 25 ರಿಂದ 29ರವರೆಗೆ 5 ದಿನಗಳ ಕಾಲ ಲೋಕ ಕಲ್ಯಾಣಕ್ಕಾಗಿ ಶ್ರೀ ಸಹಸ್ರ ಚಂಡಿಕಾಯಾಗ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿಯಾದ ಸುಧಾ ಪ್ರಸಾದ್ ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೇದ ಶಾಸ್ತ್ರಾನುಸಾರ ನಿರ್ಮಿತ 10 ಹೋಮ ಕುಂಡಗಳಲ್ಲಿ ಸುಮಾರು 130ಕ್ಕೂ ಹೆಚ್ಚು ಖುತ್ವಿಕರು ನಿರಂತರ ಯಾಗದಲ್ಲಿ ಪಾಲ್ಗೊಳ್ಳುತ್ತಾರೆ. ವೈದಿಕ ಪಂಡಿತರಾದ ಶ್ರೀ ಲಕ್ಷ್ಮೀ ನಾರಾಯಣ ಸೋಮಯಾಜಿ ಅವರು ಈ ಯಾಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ, ದಿನಾಂಕ 29 ರಂದು ನಡೆಯುವ ಮಹಾ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಶ್ರಂಗೇರಿ ಶಾರದಾ ಮಠದ ಪೀಠಾಧಿಪತಿಯಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಡಿ.23ರಂದು ಹೊರಕಾಣಿಕೆ ನಡೆಯಲಿದೆ. 25ರಂದು ಗಣಹೋಮ,26 ಶುಕ್ರವಾರದಂದು ಲಕ್ಷ್ಮೀನಾರಾಯಣ ಹ್ರದಯ ಹೋಮ,27ಶನಿವಾರದಂದು ನವಗ್ರಹ ಸಹಿತ ಮಹಾಮ್ರತ್ಯುಂಜಯ ಹೋಮ,28 ರಂದು ಧನ್ವಂತರಿ ಹೋಮ ಹಾಗೂ 29ರಂದು ಮಹಾ ಚಂಡಿಕಾ ಹೋಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉದಯ್.ಡಿ.ಭಟ್ಕಳ್ ಅಧ್ಯಕ್ಷರು,ಡಾ.ಪೂರ್ಣಿಮಾ ಬಾಳಿಗ,ಅಶೋಕ್ ಕಾಮತ್, ಚಿನ್ಮಯಿ,ಹೇಮಂತ್ ಉಪಸ್ಥಿತರಿದ್ದರು.











