Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಫಳ್ನೀರ್ ವಾರ್ಡಿನ ಗೋರಿಗುಡ್ಡ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    April 26, 2026

    ಜೆಪ್ಪು ವಾರ್ಡಿನ ಮಜಿಲ ನಾಗಬನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    April 25, 2026

    ಮೇ 30 : ಅಡ್ಯಾರ್ ಗಾರ್ಡನ್ ನಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮ 2026

    April 24, 2026

    Subscribe to Updates

    Get the latest creative news from FooBar about art, design and business.

    What's Hot

    ಫಳ್ನೀರ್ ವಾರ್ಡಿನ ಗೋರಿಗುಡ್ಡ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    April 26, 2026

    ಜೆಪ್ಪು ವಾರ್ಡಿನ ಮಜಿಲ ನಾಗಬನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    April 25, 2026

    ಮೇ 30 : ಅಡ್ಯಾರ್ ಗಾರ್ಡನ್ ನಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮ 2026

    April 24, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಜ.14, 15 : ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ 2026
    Local News

    ಜ.14, 15 : ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವ 2026

    adminBy adminJanuary 1, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು,ಜ.01 : ಇಲ್ಲಿಯ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ದಿವ್ಯಬಾಲ ಯೇಸುವಿನ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕರಾದ ವಂದನೀಯ ಫಾ|ಸ್ಟೀಫನ್ ಪಿರೇರಾ ಅವರು ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ನಡೆಸಿಕೊಡಲಿರುವರು. ಅದೇ ದಿನ ಬೆಳಿಗ್ಗೆ 10.00 ಘಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ವಿಶೇಷ ಬಲಿಪೂಜೆಯನ್ನು ನೆರವೇರಿಸುವರು ಎಂದು ಹೇಳಿದರು.

    ಜನವರಿ 15ರಂದು ಬೆಳಿಗ್ಗೆ 10.00 ಘಂಟೆಗೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ದುಮಿಂಗ್ ಡಾಯಸ್ ನಡೆಸಿಕೊಡಲಿರುವರು. ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪೂಜಾವಿಧಿಯಾಗಿದೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6.00 ಘಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರುಗಳು, ಅತಿ ವಂದನೀಯ ಮೊನ್ಸಿಂಞೆ ರ್ ಮ್ಯಾಕ್ಸಿಂ ನೊರೊನ್ಹಾಇವರು ನೆರವೇರಿಸುವರು ಎಂದರು.

    ಜನವರಿ 14ರಂದು ಬೆಳಿಗ್ಗೆ 6.00 (ಕೊಂಕಣಿ), 8.00 (ಇಂಗ್ಲೀಷ್), 1.00 (ಕನ್ನಡ) ,ಜನವರಿ 15 ರಂದು ಬೆಳಿಗ್ಗೆ 6.00, 8.00 ಘಂಟೆಗೆ ಕೊಂಕಣಿಯಲ್ಲಿ, 10.00 ಘಂಟೆಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1.00 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆ ನೆರವೇರುವುದು.ನವದಿನಗಳ ನವೇನಾ ಪ್ರಾರ್ಥನೆ: ಈ ಎರಡು ದಿನದ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನವೇನಾ ಪ್ರಾರ್ಥನೆ ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯಲಿರುವುದು.ಆ ದಿನಗಳಲ್ಲಿ ಪ್ರತಿದಿನ 9 ಪ್ರಾರ್ಥನಾ ವಿಧಿಗಳು ನಡೆಯುವವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆ ಕೊಂಕಣಿ ಭಾಷೆಯಲಿ,್ಲ ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲೀಷ್ ಹಾಗೂ 7.45 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ನಡೆಯಲಿರುವುದು ಎಂದು ಹೇಳಿದರು.

    ಜನವರಿ 5 ಸೋಮವಾರದಂದು ಬೆಳಿಗ್ಗೆ 10:30ರ ಪ್ರಾರ್ಥನಾ ವಿಧಿಯನ್ನು ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಇಗ್ನೇಶಿಯಸ್ ಡಿಸೋಜಾರವರು ನೆರವೇರಿಸಲಿರುವರು. ಆ ದಿನದಂದು ಅನಿವಾಸಿ ಭಾರತೀಯರಿಗಾಗಿ ಪ್ರಾರ್ಥಿಸಲಾಗುವುದು.ಜನವರಿ 10, ಶನಿವಾರದಂದು ಬೆಳಿಗ್ಗೆ 10:30ರ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಹೆನ್ರಿ ಡಿಸೋಜಾ, ಇವರು ನೆರವೇರಿಸಲಿರುವರು.ಈ ದಿನದಂದು ಎಲ್ಲಾ ಮಕ್ಕಳಿಗಾಗಿ ಪ್ರಾರ್ಥಿಸಲಾಗುವುದು. ಪ್ರತಿ ನವೆನಾ ದಿನಗಳಲ್ಲಿ 11.45 ರಿಂದ 12.30 ಘಂಟೆಯ ವರೆಗೆ ಪರಮ ಪ್ರಸಾದದ ಆರಾಧನೆ ನಡೆಯುವುದು. ಈ ವೇಳೆ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು. ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರತಿದಿನ ಸಂಜೆಯ 6.00 ಘಂಟೆಯ ಬಲಿಪೂಜೆಯ ಬಳಿಕ ಸುಮಾರು 7:15 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದರು.

    ಮಹೋತ್ಸವದ ಹೊರೆಕಾಣಿಕೆಯು ಜನವರಿ 3 ರಂದು ಸಂಜೆ 4.30 ಘಂಟೆಗೆ ಹೋಲಿಕ್ರಾಸ್ ಚರ್ಚ್, ಕುಲಶೇಕರದಿಂದ ಆರಂಭಗೊಳ್ಳುವುದು. ಹೊರೆಕಾಣಿಕೆಯ ಅಂತಿಮಭಾಗದಲ್ಲಿ ಸಹಬಾಳ್ವೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆನಂತರ ವಂ| ಡಾ| ಪ್ರವೀಣ್ ಮಾರ್ಟಿಸ್, ಸಂತ ಅಲೋಶಿಯಸ್ ವಿಶ್ವ ವಿದ್ಯಾಲಯದ ಉಪಕುಲಪತಿಯವರು ಧ್ವಜಾರೋಹಣವನ್ನು ಮಾಡುವರು.ನವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15 ರ ವರೆಗೆ) ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯಲಿರುವುದು.ಜನವರಿ 7 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ಕಣ್ಣಿನ ಶಿಬಿರವನ್ನು ಏರ್ಪಡಿಸಲಾಗಿದೆ.ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

    ಕಾರ್ಮೆಲ್ ಸಭೆಯ ಸುಧಾರಕಾರಾದ ಶಿಲುಬೆಯ ಸಂತವಯೊವಾನ್ನರನ್ನು ಸಂತ ಪದವಿಗೇರಿಸಿ 300 ಸಂವತ್ಸರಗಳು ಹಾಗೂ ಧರ್ಮಸಭೆಯ ಪಂಡಿತ ಎಂದು ನಾಮಕರಣಗೊಳಿಸಿ ಶತಾಬ್ದಿಯನ್ನು ಪೂರೈಸುವ ಜುಬಿಲಿ ವರ್ಷದಲ್ಲಿ ಕಾರ್ಮೆಲ್ ಇಗ್ನೆಟ್ ಎನ್ನುವ ಕಾರ್ಯಕ್ರಮದಡಿ ಬಡ ಹಾಗೂ ಯೋಗ್ಯ 400 ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನವೇನಾ ಹಾಗೂ ಹಬ್ಬದ ದಿನಗಳಲ್ಲಿ ಶಿಲುಬೆಯ ಸಂತ ಯೊವಾನ್ನರ ಜೀವನ ಹಾಗೂ ಬೋದನೆಗಳನ್ನು ಆದರಿಸಿ ಒಂದು ವಿಶೇಸ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

    ಪ್ರತಿಕಾಗೋಷ್ಠಿಯಲ್ಲಿ ಬಾಲಯೇಸುವಿನ ಪುಣ್ಯಕ್ಷೇತ್ರದ ಗುರುಮಠದ ಮುಖ್ಯಸ್ಥರು, ವಂದನೀಯ ಫಾ| ಮೆಲ್ವಿನ್ ಡಿಕುನ್ಹಾ, ಕಾರ್ಮೆಲ್ ಸಭೆಯ ವಂದನೀಯ ಫಾ| ದೀಪ್ ಫೆರ್ನಾಂಡಿಸ್, ಬಾಳೊಕ್ ಜೆಜು ಕುಟಮ್ ಇದರ ವಲೇರಿಯನ್ ಫುರ್ಟಾಡೊ, ಬಾಲಯೇಸುವಿನ ಪುಣ್ಯಕ್ಷೇತ್ರ ವ್ಯವಸ್ಥಾಪಕರು, ವಿಲ್‌ಫ್ರೆಡ್ ಲಸ್ರಾದೊ ಮೊದಲಾದವರು ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News April 26, 2026

    ಫಳ್ನೀರ್ ವಾರ್ಡಿನ ಗೋರಿಗುಡ್ಡ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    Local News April 25, 2026

    ಜೆಪ್ಪು ವಾರ್ಡಿನ ಮಜಿಲ ನಾಗಬನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    Local News April 24, 2026

    ಮೇ 30 : ಅಡ್ಯಾರ್ ಗಾರ್ಡನ್ ನಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮ 2026

    Local News April 24, 2026

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಚಿತ್ರಗಳ ಮುಹೂರ್ತ ಕಾರ್ಯಕ್ರಮ

    Local News April 23, 2026

    ಏ. 24 : “ದೇವ್ ದಾಸ್ ನ ಲೀಲಾ ” ತುಳು ಚಿತ್ರ ತೆರೆಗೆ

    Local News April 22, 2026

    ಏ.23 : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ಕೊರಗ್ಲಾ ತನಿಯ’ ಮತ್ತು ‘ ಕನ ‘ ತುಳು ಸಿನೆಮಾಕ್ಕೆ ಮುಹೂರ್ತ

    Comments are closed.

    Demo
    Don't Miss
    Local News April 26, 2026

    ಫಳ್ನೀರ್ ವಾರ್ಡಿನ ಗೋರಿಗುಡ್ಡ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    ಮಂಗಳೂರು, ಏ. 26 : : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 39ನೇ ಫಳ್ನೀರ್ ವಾರ್ಡಿನ ಗೋರಿಗುಡ್ಡ ಮುಖ್ಯ ರಸ್ತೆ…

    ಜೆಪ್ಪು ವಾರ್ಡಿನ ಮಜಿಲ ನಾಗಬನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

    April 25, 2026

    ಮೇ 30 : ಅಡ್ಯಾರ್ ಗಾರ್ಡನ್ ನಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮ 2026

    April 24, 2026

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಚಿತ್ರಗಳ ಮುಹೂರ್ತ ಕಾರ್ಯಕ್ರಮ

    April 24, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.