ಮಂಗಳೂರು,ಜ.13 : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವರ್ಷಾವಧಿ ಜಾತ್ರೆಯು ಜ.14 ರಿಂದ 24 ತನಕ ಜರಗಲಿರುವುದು.
ವರ್ಷಾವಧಿ ಜಾತ್ರೆಯು ಜ.14 ಬುಧವಾರ ದಿಂದ ಆರಂಭವಾಗಲಿದೆ. ಮುಂಜಾನೆ ತೀರ್ಥ ಸ್ನಾನ ನಡೆಯಲಿದೆ. ಸಂಜೆ 6ಕ್ಕೆ ಧ್ವಜಸ್ತಂಭ ಆರೋಹಣ ಬಳಿಕ ಶ್ರೀ ಮಲರಾಯ ದೈವದ ಭಂಡಾರ ಆಗಮನ, ರಾತ್ರಿ ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣದ ಬಳಿಕ ಉತ್ಸವ ಬಲಿ,ದೀಪದ ಬಲಿ, ಸಣ್ಣ ರಥೋತ್ಸವ ಜರಗಲಿದೆ.
ಪ್ರತಿನಿತ್ಯ ದೇವರ ಉತ್ಸವ ಬಲಿ ನಡೆಯಲಿದೆ. ಶುಕ್ರವಾರ ಬಿಕರ್ನಕಟ್ಟೆ ಸವಾರಿ, ಶನಿವಾರ ಮಲ್ಲಿಕಟ್ಟೆ ಸವಾರಿ, ಆದಿತ್ಯವಾರ ಮುಂಡಾಣಕಟ್ಟೆ ಸವಾರಿ, ಸೋಮವಾರ ಕೊಂಚಾಡಿ ಸವಾರಿ ನಡೆಯಲಿದೆ.ಜ20ರಂದು ಏಳನೇ ದೀಪೋತ್ಸವ ಹಾಗೂ ಅಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.
ಜ.21 ಸಂಜೆ 6ಕ್ಕೆ ಶ್ರೀ ಮನ್ಮಹಾರಥೋತ್ಸವ – ಬೆಳ್ಳಿ ರಥೋತ್ಸವ , ಜ.22 ಬೆಳಗ್ಗೆ ಮಂಜುನಾಥ ದೇವರ ಕವಾಟೋದ್ಘಾಟನೆ, ರಾತ್ರಿ ಚಂದ್ರಮಂಡಲ ಉತ್ಸವ, ಅವಭೃತ ಸ್ನಾನ ಹಾಗೂ ಧ್ವಜಾವರೋಹಣ. ಜ.24 ರಾತ್ರಿ ಶ್ರೀ ಮಲರಾಯ, ಶ್ರೀ ಜಾರಂದಾಯ, ಶ್ರೀ ವೈದ್ಯನಾಥ ಮತ್ತು ಶ್ರೀ ಪಿಲಿಚಾಮುಂಡಿ ದೈವಗಳ ನೇಮದೊಂದಿಗೆ ವಾರ್ಷಿಕ ಜಾತ್ರೆ ಸಮಾಪನಗೊಳ್ಳುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ.











