ಮಂಗಳೂರು, ಫೆ. 02 : ಫೆ.6ರಂದು ರಾಜ್ಯದಾದ್ಯಂತ ಕರಿಕಾಡ ಸಿನಿಮಾ ರಿಲೀಸ್ ಮಾಡ್ತಾ ಇದ್ದೇವೆ. ನಾಯಕನಟನಾಗಿ ನಾನೇ ಅಭಿನಯಿಸಿದ್ದು ನಾಯಕಿಯಾಗಿ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ ಎಂದು ಚಿತ್ರದ ನಾಯಕ ನಟ ಕಾಡ ನಟರಾಜ್ ಅವರು ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು,ಕಳಸ, ಕುದ್ರೆಮುಖ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚನ್ನಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕರಿ ಅಂದ್ರೆ ಆನೆ, ಕಾಡ ಅಂದ್ರೆ ನಾಯಕನ ಹೆಸರಾಗಿದೆ. ಚಿತ್ರದಲ್ಲಿ ಮಂಜು ಸ್ವಾಮಿ , ಯಶ್ ಶೆಟ್ಟಿ , ಗೋವಿಂದ ಗೌಡ , ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ದಿ.ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಬಲರಾಜ್ ವಾಡಿ , ಮಾಸ್ಟರ್ ಆರ್ಯನ್ ಮುಂತಾದವರು ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕೆ. ವೆಂಕಟೇಶ್ ಮಾತಾಡಿ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು 6 ಹಾಡುಗಳನ್ನು ನಾನೇ ಬರೆದಿದ್ದೇನೆ. ಎಲ್ಲ ಹಾಡುಗಳು ಕೂಡ ಚೆನ್ನಾಗಿ ಮೂಡಿಬಂದಿದ್ದು 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಎಂದರು.
ಚಿತ್ರದ ನಿರ್ಮಾಪಕಿ ದೀಪ್ತಿ ದಾಮೋದರ್ ಮಾತಾಡಿ, ನಾವೆಲ್ಲರೂ ಸಿನಿಮಾ ನೋಡಲು ಉತ್ಸುಕರಾಗಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಟಿ ನಿರೀಕ್ಷಾ ಶೆಟ್ಟಿ,ವಿತರಕ ಬಾಲಕೃಷ್ಣ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು.











