ಮಂಗಳೂರು,ಫೆ.19 : ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಕೆಲಸ ಮಾಡುತ್ತಿರುವ ಉತ್ತರ ಅಮೆರಿಕದ ಕನ್ನಡಿಗರ ಸಂಘಟನೆಯಾಗಿರುವ ‘ನಾವು ವಿಶ್ವ ಕನ್ನಡಿಗರು (ನಾವಿಕ)’ ಇದರ ಆಶ್ರಯದಲ್ಲಿ 2027ರ ಸೆಪ್ಟೆಂಬರ್ 3 ರಿಂದ 5 ನೇ ತಾರೀಕಿನವರೆಗೆ ಅಮೇರಿಕಾದ ಅಟ್ಲಾಂಟಾ ರಾಜ್ಯದ, ಸೌತ ಕನ್ವೆನ್ಸನ್ ಸೆಂಟರ್ ಅಟ್ಲಾಂಟಾದಲ್ಲಿ,”ನಾವಿಕ- ವಿಶ್ವ ಕನ್ನಡಿಗರ ಸಮ್ಮೇಳನ ನಡೆಯಲಿದೆ ಎಂದು ನಾವಿಕ ಸಂಘಟನೆಯ ಅಧ್ಯಕ್ಷೆಯಾದ ಡಾ|ಅನ್ನಪೂರ್ಣ ಭಟ್ ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ನಾವಿಕ ಸಂಘಟನೆಯು ಈ ವರ್ಷದ ನವೆಂಬರ್ ತಿಂಗಳಿನಲ್ಲಿ ದುಬೈಯಲ್ಲಿ ಕನ್ನಡ ಸಮ್ಮೇಳನವನ್ನು ನಡೆಸಲು ಈಗಾಗಲೇ ರೂಪುರೇಷೆಯನ್ನು ಹಾಕಲಾಗಿದೆ ಎಂದರು.
ಸಂಘವು ವಿಶ್ವದ ಬೇರೆ ಬೇರೆ ಭಾಗಗಳಿಂದ ಕನ್ನಡ ನಾಡು, ನುಡಿ, ಸಂಸ್ಕೃತಿ, ಆರ್ಥಿಕತೆ, ಸಾಮಾಜಿಕ ಸುಧಾರಣೆ, ಉದ್ಯಮಶೀಲತೆ, ಪರಿಸರ, ಶಿಕ್ಷಣ, ಮುಂತಾದ ಕ್ಷೇತ್ರಗಳಲ್ಲಿ ದುಡಿದು ಅನುಭವ ಮತ್ತು ಆಲೋಚನೆ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಕನ್ನಡ ಮತ್ತು ಕನ್ನಡಿಗರ ಭವಿಷ್ಯದ ಕಾರ್ಯಸೂಚಿಯನ್ನು ಸಿದ್ಧಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಐಎಂಎ ಜಿಲ್ಲಾ ಸಂಯೋಜಕ ಡಾ. ಜಿ.ಕೆ. ಭಟ್, ನಿವೃತ್ತ ಶಿಕ್ಷಕಿ ಡಾ.ರಾಜಲಕ್ಷ್ಮಿ, ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.











