ಮಂಗಳೂರು, ಮಾ. 20 : ರಂಜಾನ್ ಮಾಸದ ಅಂತ್ಯದ ಅಂಗವಾಗಿ ಮುಸ್ಲಿಂ ಬಾಂಧವರು ಶುಕ್ರವಾರ ನಗರದ ವಿವಿಧ ಮಸೀದಿಗಳು ಮತ್ತು ಈದ್ಗಾಗಳಲ್ಲಿ ಒಟ್ಟುಗೂಡಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು.ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ 30 ದಿನಗಳ ಉಪವಾಸ ಅಂತ್ಯವಾಗಿದೆ. ಈ ಸಂದರ್ಭದಲ್ಲಿ ನಮಾಜ್ ಸಲ್ಲಿಸಲು ಮಸೀದಿಗಳು ಮತ್ತು ತೆರೆದ ಪ್ರಾರ್ಥನಾ ಮೈದಾನಗಳಲ್ಲಿ ಭಕ್ತರು ಜಮಾಯಿಸಿದರು.
ಮಂಗಳೂರಿನ ಲೈಟ್ ಹೌಸ್ ಹಿಲ್ ರಸ್ತೆಯ ಈದ್ಗಾ ಮಸೀದಿ, ಕುದ್ರೋಳಿಯ ಜಾಮಿಯಾ ಮಸೀದಿ ಸೇರಿದಂತೆ ನಗರದ ಪ್ರಮುಖ ಮಸೀದಿಗಳಲ್ಲಿ ಈದ್ ಪ್ರಾರ್ಥನೆಗಳು ಜರುಗಿದವು.
ಸಾಂಪ್ರದಾಯಿಕ ಉಡುಗೆ ತೊಟ್ಟ ಮುಸ್ಲಿಂ ಬಾಂಧವರು, ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಹಬ್ಬದ ಸಡಗರದಲ್ಲಿ ಪಾಲ್ಗೊಂಡರು.











