ಮಂಗಳೂರು,ಮಾ.23 : ಬಾಬಿ ಚೆಮ್ಮನೂರು ಇಂಟರ್ನ್ಯಾಶನಲ್ ಜ್ಯುವೆಲ್ಲರ್ಸ್ ನ 58ನೇ ಶೋರೂಮ್ ನಗರದ ಕ್ಲಾಕ್ ಟವರ್ ಬಳಿ ಭಾನುವಾರ ಉದ್ಘಾಟನೆಗೊಂಡಿತು. ಶೋರೂಮ್ ಅನ್ನು ನಟ ರಾದ ಇಮ್ರಾನ್ ಹಶ್ಮಿ, ರಿಯಲ್ ಸ್ಟಾರ್ ಉಪೇಂದ್ರ ಅವರು ಉದ್ಘಾಟಿಸಿದರು
ಈ ಸಂದರ್ಭ ಮಾತನಾಡಿದ ಇಮ್ರಾನ್ ಹಶ್ಮಿ, ಬಾಬಿ ಚೆಮ್ಮನೂರು ಜ್ಯುವೆಲ್ಲರ್ಸ್ ತನ್ನ 57 ಶೋರೂಮ್ ಗಳ ಬಳಿಕ 58ನೇ ಶೋರೂಮ್ ಆರಂಭಿಸಿದೆ.ಅವರ ಉದ್ಯಮ ಮಂಗಳೂರಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ರಿಯಲ್ ಸ್ಟಾರ್ ಉಪೇಂದ್ರ ಅವರು ಹೊಸ ಶೋರೂಮ್ ಗೆ ಶುಭ ಹಾರೈಸಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರಿನಲ್ಲಿ ಚೆಮ್ಮನೂರ್ ಜ್ಯುವೆಲ್ಲರಿಯ ಇನ್ನಷ್ಟು ಶೋರೂಮ್ ಗಳು ಬರಲಿ, ಅದಕ್ಕೆ ಸಹಕಾರ ನೀಡುವುದಾಗಿ ಹೇಳಿದರು.
ಇದೇ ಸಂದರ್ಭ ಬಾಬಿ ಚೆಮ್ಮನೂರು ಅವರು ಬಡ ರೋಗಿಗಳಿಗೆ ಬೋಚೆ ಫ್ಯಾನ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯ ವಿತರಿಸಿದರು.
ಕಾರ್ಯಕ್ರಮದಲ್ಲಿ ಜ್ಯುವೆಲ್ಲರಿ ಸಂಸ್ಥೆಯ ಮಾಲೀಕ ಬಾಬಿ ಚೆಮ್ಮನೂರು, ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಮಾಜಿ ಮೇಯರ್ ಮನೋಜ್ ಕೋಡಿಕಲ್, ಉಪಮೇಯರ್ ಪೂರ್ಣಿಮಾ, ಮುಖಂಡರಾದ ಜಗದೀಶ್ ಅಧಿಕಾರಿ, ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ಕುಮಾರ್ ದಾಸ್,ಎಲಿಯಾಸ್ ಮತ್ತಿತರರು ಉಪಸ್ಥಿತರಿದ್ದರು. ಬಾಬಿ ಚೆಮ್ಮನೂರು ಇಂಟರ್ನ್ಯಾಶನಲ್ ಗ್ರೂಪ್ನ ಮಾರ್ಕೆಟಿಂಗ್ ಜನರಲ್ ಮ್ಯಾನೆಜರ್ ಅನಿಲ್ ಸಿ.ಪಿ. ಸ್ವಾಗತಿಸಿದರು.











