ಮಂಗಳೂರು, ಎ. 01 : ಬೊಕ್ಕಪಟ್ನ ಪಾಷಾಣ ಮೂರ್ತಿ ಪಂಚಾದೇವತಾ ದೈವಸ್ಥಾನ ಇಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ವಿಶ್ರಾಂತಿ ಗೃಹದ ಶಿಲಾನ್ಯಾಸ ಕಾರ್ಯಕ್ರಮವು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕರು, ಇಲ್ಲಿಗೊಂದು ಸುಸಜ್ಜಿತ ವಿಶ್ರಾಂತಿ ಗೃಹದ ಅಗತ್ಯವಿರುವ ಬಗ್ಗೆ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರು. ಅದರಂತೆ ಅನುದಾನವನ್ನು ಹೊಂದಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ದಿನೇಶ್, ಕಿರಣ್ ರೈ, ವಿನೋದ್ ಮೆಂಡನ್, ಹಾಗೂ ಪುರುಷೋತ್ತಮ ಕೋಟ್ಯಾನ್, ನಾರಾಯಣ ಕೋಟ್ಯಾನ್, ಚಂದ್ರಶೇಖರ ಕೋಟ್ಯಾನ್, ಗಿರಿಧರ್ ಕೋಟ್ಯಾನ್, ಕುಮಾರ್ ಕೋಟ್ಯಾನ್, ಗಂಗಾಧರ ಕೋಟ್ಯಾನ್ ಸೇರಿದಂತೆ ಬೊಕ್ಕಪಟ್ನದ ಕೋಟ್ಯಾನ್ ಕುಟುಂಬಸ್ಥರು, ಸ್ಥಳೀಯರು ಉಪಸ್ಥಿತರಿದ್ದರು.











