ಟೋಕಿಯೊ, ಏ. 20 : ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸೋಮವಾರ ಸಂಭವಿಸಿದೆ ಎಂದು ಜಪಾನ್ ನ ಹವಾಮಾನ ಸಂಸ್ಥೆ (ಜೆಎಂಎ) ಮಾಹಿತಿ ನೀಡಿದೆ. 3 ಮೀಟರ್ ಎತ್ತರದ ಅಲೆಗಳ ಸುನಾಮಿ ಮುನ್ನೆಚ್ಚರಿಕೆ ನೀಡಿದೆ.
ಉತ್ತರ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಮುದ್ರದಲ್ಲಿ ಸಂಜೆ 4:53 ಕ್ಕೆ ಭೂಕಂಪ ಸಂಭವಿಸಿದೆ. ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊದವರೆಗಿನ ದೊಡ್ಡ ಕಟ್ಟಡಗಳು ಕಂಪಿಸುವಷ್ಟು ಭೂಕಂಪ ಪ್ರಬಲವಾಗಿತ್ತು ಎನ್ನಲಾಗಿದೆ.
ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ತಲುಪಬಹುದು. ಈ ಸುನಾಮಿ ಅಲೆಗಳಿಂದ ಹಾನಿಯಾಗುವ ಸಾಧ್ಯತೆಯಿದೆ. ಜನರು ಈ ಕೂಡಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಹವಾಮಾನ ಸಂಸ್ಥೆ ತಿಳಿಸಿದೆ.










