ಮಂಗಳೂರು, ಏ. 23 : ಜಯಂತಿ ಪ್ರೊಡಕ್ಷನ್ ಲಾಂಛನದಲ್ಲಿ ಡಿ.ಎಸ್ ಎಂಟರ್ಟೈನ್ಮೆಂಟ್ಸ್ ಅಪ್ಸರಾ ಎಂಟರ್ಟೈನ್ಮೆಂಟ್ಸ್ ಸಹಭಾಗಿತ್ವದಲ್ಲಿ ತೇಜೇಶ್ ಪೂಜಾರಿ, ದೀಪಕ್ ಸಿಂಗ್, ಅಪ್ಸರಾ ಎಂಟರ್ಟೈನ್ಮೆಂಟ್ಸ್ ನಿರ್ಮಾಣದ ತೇಜೇಶ್ ಪೂಜಾರಿ ನಿರ್ದೇಶನ ತುಳು ಚಲನಚಿತ್ರ ದೇವ್ ದಾಸ್ ನ ಲೀಲಾ ಏ. 24 ರಂದು ಕರಾವಳಿಯಾದ್ಯಂತ ತೆರೆಗೆ ಬರಲಿದೆ ಎಂದು ನಿರ್ದೇಶಕ ತೇಜೇಶ್ ಪೂಜಾರಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚಿತ್ರದ ಟೀಸರ್ , ಹಾಡುಗಳು, ಟ್ರೇಲರ್ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ನಾಯಕನಾಗಿ ಎಲ್ಟನ್ ಜೆಫ್ ಹಾಗೂ ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ, ವಿಭಿನ್ನವಾದ ಕಥೆಯನ್ನು ಹೊಂದಿದೆ ಎಂದರು.
ಚಿತ್ರದ ಚಿತ್ರೀಕರಣವು ಮಂಗಳೂರು, ಮುಡಿಪು, ಬಜ್ಜೆ, ಬೆಂಗಳೂರು ಮುಂತಾದ ಕಡೆ ನಡೆಸಲಾಗಿದೆ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು ಬಾಲಿವುಡ್ ನ ಗಾಯಕ ಶಾನ್ ಹಾಡನ್ನು ಹಾಡಿದ್ದಾರೆ, ದಿವ್ಯ ಕುಮಾರ್, ಶೆಹಜಾದ್ ಅಲಿ, ಅನಿರುದ್ಧ ಶಾಸ್ತ್ರಿ, ಪ್ರಕಾಶ್ ಮಹಾದೇವನ್ ಗಾಯನವು ಈ ಚಿತ್ರದಲ್ಲಿದೆ ಎಂದು ತಿಳಿಸಿದರು.
ಛಾಯಾಗ್ರಾಹಕರಾಗಿ ಸಂತೋಷ್ ಆಚಾರ್ಯ ಗುಂಪಲಾಜೆ, ಸಂಕಲನಕಾರರಾಗಿ ಗಣೇಶ್ ನಿರ್ಚಲ್, ಸಂಗೀತ ನಿರ್ದೇಶಕರಾಗಿ ಸಾಯಿಷ್ ಭಾರದ್ವಾಜ್ ಮತ್ತು ಪ್ಯಾಟ್ಸನ್ ಪಿರೇರಾ ಕಾರ್ಯ ನಿರ್ವಹಿಸಿದ್ದಾರೆ.ತಾರಾಗಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಎಲ್ಟನ್ ಜೆಫ್, ಅದ್ವಿತಿ ಶೆಟ್ಟಿ, ಅನೂಪ್ ಸಾಗರ್,ಅನುಷಾ ರಾಜ್ , ವಿನಾಯಕ್ ಜಪ್ಪು, ಶೈಲಶ್ರೀ ಮುಲ್ಕಿ, ರಾಧೇಶ್ ಶೆಣೈ, ತಿಮ್ಮಪ್ಪ ಕುಲಾಲ್ ಅಭಿನಯಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಲ್ಟನ್ ಜೆಫ್, ಶೈಲಶ್ರೀ, ಅದ್ವಿತಿ ಶೆಟ್ಟಿ, ಅನೂಪ್ ಸಾಗರ್, ದೀಪಕ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.











