ಮಂಗಳೂರು: ನಮ್ಮೂರ ಆಟ ಕೂಟ ಟ್ರಸ್ಟ್ ನ ಉದ್ಘಾಟನಾ ಸಮಾರಂಭ ಹಾಗೂ ಸಾಧಕರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ರವಿವಾರ ಡಿ.05,ರಂದು ನಗರದ ಪುರಭವನದಲ್ಲಿ ಜರಗಿತು.
ಶಾಸಕರಾದ ವೇದವ್ಯಾಸ ಕಾಮತ್ ಅವರು ಟ್ರಸ್ಟ್ನ ಉದ್ಘಾಟನೆ ನೆರವೇರಿಸಿದರು.ನಂತರ ಮಾತಾಡಿ ಮೂಲ್ಕಿ ಸುಂದರರಾಮ ಶೆಟ್ಟಿಯವರು ಬ್ಯಾಂಕಿಂಗ್ ಹಾಗೂ ಇತರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ ಇಂದು ಈ ವೇದಿಕೆಯಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡುವುದು ಉತ್ತಮ ಕಾರ್ಯ ಎಂದರು.
ಮೂಲ್ಕಿ ಸುಂದರರಾಮ ಶೆಟ್ಟಿ ಅವರು ಒಬ್ಬ ಆದರ್ಶ ವ್ಯಕ್ತಿಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಲ್ಲಿಸಿದ ಅವರ ಸೇವೆಯು ಸದಾ ಸ್ಮರಣೀಯ ಎಂದು ಶ್ರೀ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ್ ಹೆಗ್ದೆ ಅವರು ಮಾತಾಡಿ ಬ್ಯಾಂಕಿಂಗ್ ಕ್ಷೇತ್ರದ ಅವರ ಸೇವೆ ಬಹಳ ಶ್ರೇಷ್ಠವಾದದ್ದು,ವಿಜಯ ಬ್ಯಾಂಕನ್ನು ಅವರು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಸದಾನಂದ ಶೆಟ್ಟಿ (ಶಿಕ್ಷಣ, ಕ್ರೀಡೆ, ಉದ್ಯಮ ಕ್ಷೇತ್ರ),ಹನುಮಂತ ಕಾಮತ್ (ಸಾಮಾಜಿಕ ಜಾಗೃತಿ),ಸರ್ವೋತ್ತಮ ಬಿ.ಶೆಟ್ಟಿ (ವಿದೇಶದಲ್ಲಿ ತುಳು,ಕನ್ನಡ ಸಂಘಟನೆ),ಕದ್ರಿ ನವನೀತ ಶೆಟ್ಟಿ (ಸಾಂಸ್ಕೃತಿಕ-ಧಾರ್ಮಿಕ ),ಪಟ್ಲ ಸತೀಶ್ ಶೆಟ್ಟಿ (ಯಕ್ಷಗಾನ)ವಿಟ್ಠಲ ಡಿ.ಶೆಟ್ಟಿ( ಬ್ಯಾಂಕಿಂಗ್ ) ಅವರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶಾಸಕ ಡಾ| ಭರತ್ ಶೆಟ್ಟಿ,ಮೇಯರ್ ಪ್ರೇಮನಂದ ಶೆಟ್ಟಿ,ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ಉಳಿದೊಟ್ಟು,ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ,ಸಂಗೀತ ನಿರ್ದೆಶಕ ಗುರುಚರಣ್, ಟ್ರಸ್ಟ್ ನ ಅಧ್ಯಕ್ಷ ಮೂಲ್ಕಿ ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.