ಬೆಂಗಳೂರು :ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಹಾಗೂ ಓಮಿಕ್ರಾನ್ ಸೋಂಕಿಗೆ ಕಡಿವಾಣ ಹಾಕಲುರಾಜ್ಯ ಸರಕಾರ ಮತ್ತೊಂದಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರಾದ ಡಾ. ಸುಧಾಕರ್, ಆರ್. ಅಶೋಕ್, ಅಶ್ವತ್ಥ ನಾರಾಯಣ್ ಹಾಗೂ ತಜ್ಞರ ಸಮಿತಿ ಜತೆ ಸುಮಾರುಮೂರುವರೆ ಗಂಟೆಗಳ ಕಾಲನಡೆದ ಸಭೆ ಬಳಿಕ ಸಚಿವರು ಈ ನಿರ್ಧಾರವನ್ನು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ 10-12ನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳನ್ನು ಮುಚ್ಚಿ ಕೇವಲ ಆನ್‌ಲೈನ್ ತರಗತಿ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮುಂದುವರೆಯಲಿದ್ದು ಈ ವಾರದಿಂದ 2 ವಾರ ವಾರಾಂತ್ಯದ ಕರ್ಫ್ಯೂ ಇರಲಿದೆ. ಪಬ್, ಬಾರ್, ಮಾಲ್, ಚಿತ್ರಮಂದಿರ, ಹೋಟೆಲ್ ಗಳಲ್ಲಿ ಶೇ. 5050ರಷ್ಟುಜನರ ಮಿತಿ ಇರಬೇಕು. ಯಾವುದೇ ಸಭೆ, ಸಮಾರಂಭ ಮಾಡುವಂಯಿಲ್ಲ ಇದು ಎಲ್ಲಾ ರಾಜಕೀಯ ಪಕ್ಷಕ್ಕೂ ಅನ್ವಯ.
ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಪೂಜೆ ಯಥಾಸ್ಥಿತಿ ಆದರೆ ನಿಗದಿಗಿಂತ ಅಧಿಕ ಜನರು ಸೇರುವ ಹಾಗಿಲ್ಲ. ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ. ಅವರಿಗೂ 2 ಡೋಸ್ ಆಗಿರಬೇಕು. ಸಾರ್ವಜನಿಕರು ಕೋವಿಡ್ ನಿಯಮಾವಳಿಪಾಲಿಸಬೇಕೆಂದು ಸಚಿವರು ಮನವಿ ಮಾಡಿದರು.
4 Comments
Pingback: ks quik
Pingback: ดูซีรี่ย์ออนไลน์
Pingback: 220.lv
Pingback: ติดตั้งโซลาเซลล์