ಮಂಗಳೂರು : ನಗರದ ಭೂಮಿಕಾ ಟೆಕ್ಸ್ ಟೈಲ್ಸ್ ಮಾಲಕಿ ಸುಮಾ ಸತೀಶ್ ಮಾರ್ಚ್ 15, ಮಂಗಳವಾರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಣ್ಣಗುಡ್ಡೆಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಅವರು, ಅನಾರೋಗ್ಯದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಇದೆ. ಸುಮಾ ಸತೀಶ್ ಅವರು ಸತೀಶ್ ಪಿ. ಕೆ ಅವರ ಪತ್ನಿ ಮತ್ತು ಉದ್ಯಮಿ ಪಿ. ಕೆ ದೂಜಾ ಪೂಜಾರಿ ಅವರ ಸೊಸೆಯಾಗಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ