ಮಂಗಳೂರು : ಬೋಳಾರದಲ್ಲಿರುವ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಮಾ.24, ಗುರುವಾರದಂದು ರಥೋತ್ಸವ ಕಾರ್ಯಕ್ರಮವು ವಿಜ್ರಂಭನೆಯಿಂದ ಜರಗಿತು.
ಅಂದು (ಗುರುವಾರ)ಪ್ರಾತ:ಕಾಲ ಪೂಜೆ,ಗಣಪತಿ ಹೋಮ,ನವಕಲಶಾಭಿಷೇಕ ಮಧ್ಯಾಹ್ನ ಗಂಟೆ 12ಕ್ಕೆ ಪೂಜೆಯಾಗಿ ರಥಾರೋಹನ,ಸಂಜೆ ಗಂಟೆ 6.30ಕ್ಕೆ ರಥೋತ್ಸವ,ಬಲಿ,ಬಟ್ಟಲು ಕಾಣಿಕೆ,ಮಹಾಪೂಜೆ,ಶ್ರೀ ಭೂತಬಲಿ,ಕವಾಟ ಬಂಧನ,ಶಯನ ಕಾರ್ಯಕ್ರಮಗಳು ಜರಗಿದವು.
ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದಲ್ಲಿ ತಾ.20-03-2022ನೇ ರವಿವಾರದಿಂದ ತಾ.25-03-2022 ಶುಕ್ರವಾರತನಕ ವರ್ಷಾವಧಿ ಜಾತ್ರೋತ್ಸವದ ಕಾರ್ಯಕ್ರಮದಲ್ಲಿ ಊರ-ಪರಊರ ಭಕ್ತಾಧಿಗಳು ಪಾಲ್ಗೊಂಡಿದ್ದರು.