ನೆದರ್ಲೆಂಡ್ : ಮಾನವನ ರಕ್ತದಲ್ಲಿ ಇದೇ ಮೊದಲ ಬಾರಿಗೆ ಮೈಕ್ರೊಪ್ಲಾಸ್ಟಿಕ್ ಕಂಡು ಬಂದಿವೆ. ಮೈಕ್ರೊಪ್ಲಾಸ್ಟಿಕ್ ಅಂದ್ರೆ ಪ್ಲಾಸ್ಟಿಕ್ ನ ಸಣ್ಣ ಕಣಗಳು. ಈ ಪ್ಲಾಸ್ಟಿಕ್ ನ ಸಣ್ಣ ಕಣಗಳು ಇನ್ಮುಂದೆ ಮಾನವನ ಇತರ ಅಂಗಗಳಿಗೆ ಸಂಚಾರಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಮೈಕ್ರೋಪ್ಲಾಸ್ಟಿಕ್‌ಗಳು – 0.2 ಇಂಚು (5 ಮಿಮೀ) ಗಿಂತ ಕಡಿಮೆ ವ್ಯಾಸದ ಪ್ಲಾಸ್ಟಿಕ್‌ನ ಸಣ್ಣ ಸಣ್ಣ ತುಣುಕುಗಳು ಮಾನವ ರಕ್ತದಲ್ಲಿ ಕಂಡುಬಂದಿವೆ. ನೆದರ್ಲೆಂಡ್ ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 10 ರಲ್ಲಿ 8 ಜನರ ದೇಹದಲ್ಲಿ ಮೈಕ್ರೋ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ. ಇಲ್ಲಿ ನ ವಿಜ್ಞಾನಿಗಳ ತಂಡವು ಆರೋಗ್ಯವಂತ ಸ್ವಯಂಸೇವಕರಿಂದ ರಕ್ತದ ಮಾದರಿಗಳನ್ನು ಪರೀಕ್ಷಿಸಿದೆ. ಪರೀಕ್ಷೆಗೊಳಪಡಿಸಿದ ಸ್ಯಾಂಪಲ್‌ಗಳ ಪೈಕಿ ಶೇ.80ರಷ್ಟು ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದು ದೃಢಪಟ್ಟಿದೆ.
ಮೈಕ್ರೋ ಪ್ಲಾಸ್ಟಿಕ್ ಪತ್ತೆಯಾದವರ ರಕ್ತದ ರಕ್ತದ ಮಾದರಿಗಳು ಪಿಈಟಿ ಪ್ಲಾಸ್ಟಿಕ್‌ನ ಇರುವುದು ಪತ್ತೆಯಾಗಿದೆ. ಇದು ಸಾಮಾನ್ಯವಾಗಿ ಊಟದ ಪ್ಲೇಟ್, ಕುಡಿಯುವ ನೀರಿನ ಬಾಟಲ್, ಬಟ್ಟೆಗಳನ್ನು ಪ್ಯಾಕ್ ಮಾಡುವ ಕವರ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.