ಜೆಡ್ಡಾ: ಕೊರೊನಾ ಕೇಸ್ ಗಳು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು ಭಾರತ ಸೇರಿದಂತೆ 20 ದೇಶಗಳಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಒಟ್ಟು 3.68 ಲಕ್ಷ ಕೊರೊನಾ ಕೇಸ್ ಗಳು ಪತ್ತೆಯಾಗಿದ್ದು,ಈ ಪೈಕಿ ಒಟ್ಟು6,383 ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಡೇಟಾ ಹೇಳಿದೆ. ಬುಧವಾರ ಪ್ರಾರಂಭವಾಗುವ ತಾತ್ಕಾಲಿಕ ಅಮಾನತು ನಿಯಮವು ಸೌದಿ ನಾಗರಿಕರಿಗೆ, ರಾಜತಾಂತ್ರಿಕ ರಿಗೆ, ವೈದ್ಯಕೀಯ ಸೇವೆಯಲ್ಲಿರುವವರು ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್ಪಿ ವರದಿ ಮಾಡಿದೆ.