ಟೆಕ್ಸಾಸ್ : ನೈರುತ್ಯ ಸ್ಯಾನ್ ಆಂಟೋನಿಯೊದ ದೂರದ ಹಿಂಭಾಗದ ರಸ್ತೆಯಲ್ಲಿ ಶಂಕಿತ ವಲಸಿಗರನ್ನ ಒಳಗೊಂಡ ಟ್ರೇಲರ್ ಟ್ರಕ್ ಪತ್ತೆಯಾಗಿದ್ದು, ಅದರಲ್ಲಿ 46 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇತರ 16 ಮಂದಿಯನ್ನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರು ಹೇಗೆ ಮೃತಪಟ್ಟಿದ್ದಾರೆ ಎಂದು ಇನ್ನೂ ಸ್ವಷ್ಟವಾಗಿಲ್ಲ.ಈ ಪ್ರದೇಶದಲ್ಲಿ ಟ್ರೇಲರ್ ಟ್ರಕ್ ಪತ್ತೆಯಾಗುವುದಕ್ಕೂ ಕೆಲ ಹೊತ್ತಿನ ಮೊದಲು ಚಾಲಕ ಅದನ್ನು ಅಲ್ಲಿ ಬಿಟ್ಟುಹೋಗಿರಬಹುದು ಎಂಬ ಶಂಕೆಯ ಮೇರೆಗೆ ಆತನಿಗಾಗಿ ಪೋಲಿಸರು ಹುಡುಕಾಟ ಆರಂಭಿಸಲಾಗಿದೆ ಎಂದು ವರದಿಯಾಗಿದೆ.