ಬ್ರಹ್ಮಾವರ : ಆಟವಾಡಲೆಂದು ತೆರಳಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ದುರ್ಘಟನೆಯೊಂದು ಬ್ರಹ್ಮಾವರದ ಬಳಿ ಜು. 13, ಬುಧವಾರದಂದು ನಡೆದಿದೆ.
ಮಗು ಮನೆಯ ಪಕ್ಕ ಆಟವಾಡುತ್ತಿದ್ದಾಗ ಆಕಸ್ಮತ್ತಾಗಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದೆ. ಲಾರೆನ್ ಲೂವಿಸ್ ಮೃತಪಟ್ಟ ಬಾಲಕ. ಈತ ನೋರ್ಮನ್ ಮತ್ತು ಸಿಲ್ವಿಯ ಎಂಬವರ 5 ವರ್ಷದ ಪುತ್ರ ಎಂದು ಗುರುತಿಸಲಾಗಿದೆ.
ಬ್ರಹ್ಮಾವರ ತಾಲೂಕು ಉಪ್ಪೂರು ತೆಂಕಬೆಟ್ಟು ಬಳಿ ಈ ಘಟನೆ ನಡೆದಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











