ಮಂಗಳೂರು : ನಾಡಿನಾದ್ಯಂತ ಆ.31 ಬುಧವಾರ ನಡೆದ ಗಣೇಶ ಚತುರ್ಥಿಯಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ವಿವಿಧ ದೇವಸ್ಥಾನಗಳಿಗೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಪೆಂಡಾಲಿಗೆ ತೆರಳಿ ದೇವರಿಗೆ ಕೈ ಮುಗಿದು ಪ್ರಸಾದವನ್ನು ಸ್ವೀಕರಿದರು. ದೇವಸ್ಥಾನಗಳಲ್ಲಿ ಹಾಗೂ ಸಾರ್ವಜನಿಕ ಪೆಂಡಾಲುಗಳಲ್ಲಿ 108 ಸಹಸ್ರನಾಳಿಕೇರ ಗಣಹೋಮ,ಮೂಡುಗಣಪತಿ ಸೇವೆಗಳು ಜರಗಿದವು.
ವಿವಿಧ ದೇವಸ್ಥಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಪ್ಪ,ಅಷ್ಟದ್ರವ್ಯ ಪಂಚಕಜ್ಜಾಯ,ಲಡ್ಡು,ಮೋದಕ,ಕೊಟ್ಟೆ ಕಡುಬು ದೇವರಿಗೆ ಸಮರ್ಪಿಸಿದ್ದು,ಬಳಿಕ ಭಕ್ತರು ಇವುಗಳನ್ನು ಸ್ವೀಕರಿಸಿದರು.ಗಣಹೋಮಗಳು,ಮುಡಿಅಕ್ಕಿಕಡುಬು,ಮೂಡುಗಣಪತಿ ಸೇವೆಗಳು,ಅನ್ನಪ್ರಸಾದ,ರಾತ್ರಿ ಹೂವಿನ ಪೂಜೆ ನಡೆದವು.