ಮಂಗಳೂರು:ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸೆ.8,ಗುರುವಾರದಂದು ಕ್ರೈಸ್ತರು ಮೊಂತಿಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕ್ರೈಸ್ತರ ಮೊಂತಿ ಫೆಸ್ತ್ ಅಥವಾ ತೆನೆಹಬ್ಬ ಸೆಪ್ಟೆಂಬರ್ ತಿಂಗಳ 8ನೇ ತಾರೀಕಿನಂದು ಬರುತ್ತದೆ. ಅಂದು ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮದಿನ. ಈ ದಿನವನ್ನು ಕರಾವಳಿಯ ಜಿಲ್ಲೆಗಳಲ್ಲಿ ಕ್ರೈಸ್ತ ಬಾಂಧವರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಲಾಗುತ್ತದೆ.
ಕರಾವಳಿಯ ಕ್ರೈಸ್ತರು ಹೆಚ್ಚಿನವರು ಕೃಷಿಯನ್ನೇ ಜೀವನಾಧರವಾಗಿ ನಂಬಿದವರು. ಇನ್ನು ಬೆಳೆ ಹಬ್ಬ ಆಗಿರುವುದರಿಂದ ಇದು ಸಾಂಸ್ಕತಿಕ ಆಚರಣೆಯೂ ಆಗಿದೆ. ಹೀಗೆ ಮೇರಿ ಮಾತೆಯ ಜನ್ಮ ದಿನಾಚರಣೆಯ ಜತೆಗೆ ಬೆಳೆ ಹಬ್ಬವನ್ನೂ ಥಳಕು ಹಾಕಿಕೊಂಡು ಮೊಂತಿ ಫೆಸ್ತ್ ಆಚರಿಸಲಾಗುತದೆ.