ಕಾಸರಗೋಡು: ಅ.5,ಬುಧವಾರ ತಡರಾತ್ರಿ ತೃಶ್ಯೂರು ವಡಕ್ಕಂಚೇರಿಯಲ್ಲಿ ನಡೆದ ಬಸ್ಸು ಅಪಘಾತದಲ್ಲಿ9 ಮಂದಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ9 ಮಂದಿ ಮೃತಪಟ್ಟಿದ್ದು,ಈ ಪೈಕಿ6 ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ.
ಅಪಘಾತವು ಬುಧವಾರ ತಡರಾತ್ರಿ ನಡೆದಿತ್ತು. ಕೇರಳದ ಎರ್ನಾಕುಲಂ ಮುಳುಂಪುರತ್ ವೆಟ್ಟಿಕಲ್ ಮಾರ್ ಬಸೆಲಿಯಾಸ್ ವಿದ್ಯಾರ್ಥಿಗಳು ಊಟಿಗೆ ಪ್ರವಾಸಕ್ಕೆ ಹೊರಟಿದ್ದರು. ಈ ಬಸ್ಸು ವಡಕ್ಕಂಚೇರಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟು, 5೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.