ಕೊಯಮತ್ತೂರು : ಕಾರು ಚಲಿಸುತ್ತಿದ್ದ ವೇಳೆ ಕಾರಿಗೆ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಜೀವ ದಹನವಾದ ಘಟನೆ ಕೊಯಮತ್ತೂರಿನ ಉಕ್ಕಡಂ ಬಳಿಯ ಕೊಟ್ಟೈಮೇಡುವಿನ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಅ. 23, ಭಾನುವಾರ ಬೆಳಿಗ್ಗೆನಡೆದಿದೆ.
ಸ್ಫೋಟದ ಶಬ್ದ ಕೇಳಿದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ