ಮಧ್ಯಪ್ರದೇಶ, ಜ. 06 :ಮಧ್ಯಪ್ರದೇಶದ ರೇವಾ ಎಂಬಲ್ಲಿ ತರಬೇತಿ ನಿರತ ವಿಮಾನವು ದೇವಸ್ಥಾನದ ಮೇಲಿನ ಗರ್ಭಗುಡಿಗೆ ಡಿಕ್ಕಿ ಹೊಡೆದು ನೆಲಕ್ಕಪ್ಪಳಿಸಿದೆ. ಈ ಘಟನೆ ಚೌರ್ಹತಾ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಿ ಗ್ರಾಮದಲ್ಲಿ ಶುಕ್ರವಾರ,ಜ.6 ರಂದು ನಡೆದಿದೆ.
ಈ ವೇಳೆ ಹಿರಿಯ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ತರಬೇತು ಪೈಲಟ್ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.