ಪುತ್ತೂರು, ಫೆ 03 : ಕಾರಿಗೆ ಡಿಕ್ಕಿಯಾದ ನಾಯಿಯೊಂದು ಕಾರಿನ ಬಂಪರಿನೊಳಗೆ ಸಿಲುಕಿಕೊಂಡು ಸುಮಾರು 70 ಕಿ.ಮೀ. ಯಾವುದೇ ಗಾಯಗಳಾಗದೆ ಪ್ರಯಾಣಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಟಿ.ಎಸ್. ಕುಟುಂಬ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಬರುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಬಳ್ಪ ಎಂಬಲ್ಲಿ ನಾಯೊಂದು ಚಲಿಸುವ ಕಾರಿಗೆ ಡಿಕ್ಕಿ ಹೊಡೆದಿದ್ದು, ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದ್ದು, ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದ್ದಾರೆ. ಆದರೆ ನಾಯಿ ಪತ್ತೆಯಾಗಿರಲಿಲ್ಲ.
ಮನೆಗೆ ಬಂದ ಬಳಿಕ ಕಾರನ್ನು ಪರಿಶೀಲಿಸಿದಾಗ ಬಂಪರ್ನೊಳಗೆ ನಾಯಿ ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಮೆಕ್ಯಾನಿಕ್ ಅವರನ್ನು ಕರೆಸಿ ನಾಯಿಯನ್ನು ಹೊರಕ್ಕೆ ತೆಗೆಯಲಾಗಿದೆ.