ನವದೆಹಲಿ, ಫೆ. 06 : ದೇಶದ ಈಶಾನ್ಯ ಭಾಗದ ಹಿಂದುಳಿದ ಪ್ರದೇಶಗಳಿಗೆ ಕನಿಷ್ಠ ಸಂಖ್ಯೆಯ ಕಡ್ಡಾಯ ವಿಮಾನಗಳನ್ನು ನಿರ್ವಹಿಸಲು ವಿಫಲವಾಗಿರುವುದಕ್ಕಾಗಿ ವಿಸ್ತಾರ ಏರ್ ಲೈನ್ಸ್ ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ 70 ಲಕ್ಷ ದಂಡ ವಿಧಿಸಿದ್ದು, ಇದೀಗ ವಿಸ್ತಾರ ಏರ್ ಲೈನ್ಸ್ ಅದನ್ನು ಪಾವತಿಸಿದೆ ಎಂದು ವರದಿಯಾಗಿದೆ.
ವಿಸ್ತಾರ ಸಂಸ್ಥೆ ಸರ್ಕಾರದ ಆದೇಶಗಳನ್ನು ಮತ್ತು ಕಾನೂನು ಪಾಲನೆ ಮಾಡುತ್ತಿದೆ. ಅದ್ದರಿಂದ ಸಂಸ್ಥೆ ದಂಡ ಪಾವತಿಸಿದೆ ಎಂದು ವಿಸ್ತಾರ ವಕ್ತಾರರು ತಿಳಿಸಿದ್ದಾರೆ.