ಮುಳ್ಳೇರಿಯ, ಫೆ 09 : ಸ್ನಾನಕ್ಕೆಂದು ಹೊಳೆಗೆ ಇಳಿದು ಅಪಾಯದಲ್ಲಿದ್ದ 11 ವರ್ಷ ವಯಸ್ಸಿನ ಬಾಲಕನನ್ನು 8 ವರ್ಷದ ಬಾಲಕ ರಕ್ಷಿಸಿದ ಘಟನೆ ಮುಳ್ಳೇರಿಯಾದಲ್ಲಿ ನಡೆದಿದೆ.
ಮುಳ್ಳೇರಿಯಾದ ಸ್ಥಳೀಯ ಬಾಲಕನೋರ್ವ ಪಳ್ಳಂಗೋಡು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದ. ಈ ವೇಳೆ ನದಿಯಲ್ಲಿ ನೀರು ಹೆಚ್ಚಿದ್ದರಿಂದ ಬಾಲಕ ಅಪಾಯಕ್ಕೆ ಸಿಲುಕಿದ್ದನು. ಆಗ ಆತನ ಜೊತೆಗಿದ್ದ ಪಳ್ಳಂಗೋಡಿನ ಇಬ್ರಾಹಿಂ ನಈಮಿ-ಬುಶ್ರಾ ದಂಪತಿಯ ಪುತ್ರ ಮುಹಮ್ಮದ್ ಹಿಬಾತುಲ್ಲ (8) ಅಪಾಯಕ್ಕೆ ಸಿಲುಕಿದ್ದ 11 ವರ್ಷದ ಬಾಲಕನನ್ನು ರಕ್ಷಿಸಿದ್ದಾನೆ.