ನವದೆಹಲಿ, ಫೆ. 14: ಭೂಕಂಪದಿಂದ ತತ್ತರಿಸಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ( ಎನ್ ಡಿ ಆರ್ ಎಫ್ ) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಎನ್ ಡಿ ಆರ್ ಎಫ್ ನ ಜೂಲಿ ಮತ್ತು ರೋಮಿಯೋ ಹೆಸರಿನ ಎರಡು ಪತ್ತೆದಾರಿ ಶ್ವಾನಗಳು ಆರು ವರ್ಷದ ಬಾಲಕಿಯನ್ನು ರಕ್ಷಿಸುವಲ್ಲಿ ವಿಶೇಷ ಪಾತ್ರವಹಿಸಿವೆ.
ಯಂತ್ರೋಪಕರಣಗಳು ವೈಫಲ್ಯ ಕಂಡ ಜಾಗದಲ್ಲಿ ರೊಮಿಯೋ ಮತ್ತು ಜೂಲಿ ಎಂಬ ಶ್ವಾನ ಜೋಡಿ ಮೂಸುತ್ತಾ ಅವಶೇಷಗಳಡಿಯಲ್ಲಿ ಬಾಲಕಿ ಇರುವುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ