ಲಖನೌ, ಫೆ. 19 : ಬೀದಿ ನಾಯಿಗಳ ದಾಳಿಗೆ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಲಖನೌನಲ್ಲಿ ಶನಿವಾರ ನಡೆದಿದೆ.
ದಾಳಿಯಿಂದ ಸಾವನ್ನಪ್ಪಿದ ಬಾಲಕ ವಿಕಾಸ್ ಎಂಬುವರ ಏಳು ವರ್ಷದ ಪುತ್ರ ನಾಗಿರುತ್ತಾನೆ. ಬಾಲಕ ತನ್ನ ಮನೆ ಬಳಿ ಆಟವಾಡುತ್ತಿದ್ದ ವೇಳೆ ಬೀದಿನಾಯಿಗಳು ದಾಳಿ ನಡೆಸಿದ್ದು,ನಾಯಿಗಳ ದಾಳಿಯಿಂದಾಗಿ ಬಾಲಕ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.