ಸುಳ್ಯ, ಮಾ. 07 : ಬೆಳ್ಳಾರೆ ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡ ಕೆಡವುತ್ತಿರುವ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನುಕಾರ್ಮಿಕ ಮಂಜುನಾಥ(23) ಎಂದು ಗುರುತಿಸಲಾಗಿದೆ.
ಹಳೆ ಕಟ್ಟಡ ಕೆಡವುವ ಕಾರ್ಯ ನಡೆಯುತ್ತಿತ್ತು. ಊಟದ ವಿರಾಮದ ನಂತರ ಗೋಡೆ ಕೆಡವುತ್ತಿದ್ದಾಗ ಗೋಡೆ ಕುಸಿದು ಕಾರ್ಮಿಕ ಮಂಜುನಾಥ ಎಂಬವರ ಮೇಲೆ ಬಿದ್ದಿದೆ. ಕಲ್ಲುಗಳ ಅಡಿಗೆ ಸಿಲುಕಿದ ಅವರನ್ನು ಇತರ ಕಾರ್ಮಿಕರು ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.