ಕಾಸರಗೋಡು, ಮಾ. 13: ಆಟೋ ರಿಕ್ಷಾ ಚಾಲಕ ನೋರ್ವ ಅವರ ಮನೆ ಸಮೀಪ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬದಿಯಡ್ಕ ಸಮೀಪದ ಪಳ್ಳ ತ್ತಡ್ಕ ದಲ್ಲಿ ನಡೆದಿದೆ.
ಮೃತರನ್ನು ಕುಡ್ಪ oಗುಯಿ ಕಡಾರ್ ಪ ಳ್ಳ ದ ಅಬ್ದುಲ್ ಸಲಾಂ (27) ಎಂದು ಗುರುತಿಸಲಾಗಿದೆ. ಅಬ್ದುಲ್ ಸಲಾಂ ಅವರು ನಾಪತ್ತೆಯಾ ದುದರಿಂದ ಶೋಧ ನಡೆಸಿದಾಗ ಮನೆ ಸಮೀಪದ ಮರವೊಂದರಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬದಿಯಡ್ಕ ಪೊಲೀಸರು ಮಹಜರು ನಡೆಸಿ ದ್ದು ,ಕಾಸರಗೋಡು ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು ಎನ್ನಲಾಗಿದೆ.