ಮಂಗಳೂರು ಮಾ.13: ದಕ್ಷಿಣ ಕನ್ನಡ ಜಿಲ್ಲಾ ಯೂಸ್ಡ್ ವೆಹಿಕಲ್ ಡೀಲರ್ಸ್ ಎಂಡ್ ಏಜೆಂಟ್ ಎಸೋಸಿಯೇಶನ್ ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಿತ ಕಂಪೆನಿಗಳ ಸಹಭಾಗಿತ್ವದಲ್ಲಿ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳ ‘ವಾಹನ ಮೇಳ-2023’ ಇದರ ಸಮಾರೋಪ ಕಾರ್ಯಕ್ರಮವು ಮಂಗಳೂರಿನ ಕರಾವಳಿ ಮೈದಾನದಲ್ಲಿ ಮಾ.12,ಭಾನುವಾರ ಜರಗಿತು.ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮಕ್ಕೆ ಮೇಯರ್ ಜಯಾನಂದ ಅಂಚನ್ ಶನಿವಾರ ಚಾಲನೆ ನೀಡಿದ್ದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿದ್ದ ಮಾಜಿ ಶಾಸಕರಾದ ಜೆ.ಆರ್ ಲೋಬೋ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು.ನಂತರ ಮತ್ತೊಬ್ಬ ಅತಿಥಿ ಚಿಲಿಂಬಿ ಶ್ರೀ ಶಿರಿಡಿ ಸಾಯಿಬಾಬಾ ಸೇವಾ ಮಂದಿರದ ಆಡಳಿತ ಮೊಕ್ತೇಸರಾದ ವಿಶ್ವಾಸ್ ದಾಸ್ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಎಸೋಸಿಯೇಶನ್ ಇದರ ಗೌರವಧ್ಯಕ್ಷರು ಬಿ.ಅಶೋಕ್ ಕುಮಾರ್ ಶೆಟ್ಟಿ,ಅಧ್ಯಕ್ಷರು ಎಚ್. ಜಯರಾಜ್ ಕೊಟ್ಯಾನ್,ಕಾರ್ಯದರ್ಶಿ ಮುನೀರ್ ಅಹಮ್ಮದ್,ಕೋಶಾಧಿಕಾರಿ ಪ್ರತಾಪ್ ಕೆ.ಎಸ್.,ಉಡುಪಿಯ ಪ್ರೀ ಒಲ್ಡ್ ವೆಹಿಕಲ್ ಡೀಲರ್ಸ್ ಎಸೋಸಿಯೇಶನ್ ನ ಅಧ್ಯಕ್ಷರು ಅಶ್ರಫ್,ಸಂಘಟನ ಕಾರ್ಯದರ್ಶಿ ಅಬ್ದುಲ್ ಸಲಾಂ, ಸಾಮಾಜಿಕ ಕಾರ್ಯಕರ್ತರು ಮಂಜುಳ ನಾಯಕ್,ಹರ್ಷವರ್ಧನ್ ಶೇಟ್,ಮಹಮ್ಮದ್ ರಜಾಕ್ ಮತ್ತು ಎಸೋಸಿಯೇಶನ್ ನ ಪದಾಧಿ ಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.