ಕಾಸರಗೋಡು, ಮಾ. 21: ವಿದ್ಯಾರ್ಥಿನಿಯೊಬ್ಬಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂದಡ್ಕದಲ್ಲಿ ನಡೆದಿದೆ.
ಮೃತರನ್ನು ಬಂದಡ್ಕ ಮಾಲಕುಂಡ ಇಲ್ಲತಿಂಗಲ್ನ ನಿವಾಸಿ ಕೆ. ವಿ ಶರಣ್ಯ (17) ಎಂದು ಗುರುತಿಸಲಾಗಿದೆ. ಶರಣ್ಯ ಅವರು ಬಂದಡ್ಕ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದಳು.
ಸೋಮವಾರ ಶರಣ್ಯ ಅವರ ತಾಯಿ ಸುಜಾತಾರವರು ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ಕಿಟಿಕಿ ಮೂಲಕ ಮನೆಯ ಕೋಣೆಯೊಳಗೆ ಗಮನಿಸಿದಾಗ ಶರಣ್ಯ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಈ ಬಗ್ಗೆ ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಕೆ ನಡೆಸುತ್ತಿದ್ದಾರೆ.