ಮಂಗಳೂರು, ಎ.3 : ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ ಇದರ ಬೆಳ್ಳಿಹಬ್ಬದ ಸಂಭ್ರಮಾಚರಣೆ ಹಾಗೂ ಸಂಘದ ನೂತನ ಕಟ್ಟಡದ ಉದ್ಘಾಟನೆಯು ಜಪ್ಪು ಮೋರ್ಗನ್ಸ್ ಗೇಟ್ ರಾಮಕ್ಷತ್ರಿಯ ಮಂದಿರದ ಬಳಿ ಎ.2,ಭಾನುವಾರ ನೆರವೇರಿತು.
ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷರು ಡಾ| ಎಂ. ಎನ್, ರಾಜೇಂದ್ರ ಕುಮಾರ್ ಅವರು ನೆರವೇರಿಸಿದರು. ನಂತರ ಮಾತಾಡಿ ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರ ನೇತೃತ್ವದಲ್ಲಿ ನಿರ್ದೇಶಕ ಮಂಡಳಿಯ ಸಹಕಾರದೊಂದಿಗೆ ಸಂಘವು 25 ವರ್ಷಗಳಲ್ಲಿ ಕೋಟಿ ರೂಪಾಯಿಗೂ ಮೀರಿದ ಲಾಭ ಗಳಿಸಿದೆ ಹಾಗೆನೇ ಉತ್ತಮ ಸೇವೆಯನ್ನು ನೀಡುತ್ತ ಬಂದಿದೆ. ಈ ಸಂಘದ ಮೂಲಕ ಇನ್ನೂ ಹೆಚ್ಚಿನ ಸೇವೆಗಳು ಜನರಿಗೆ ದೊರೆಯಲಿ ಎಂದರು.
ಮೇಯರ್ ಜಯಾನಂದ ಅಂಚನ್ ಮಾತಾಡಿ ಸಂಘವು ಬಡ ಕುಟುಂಬಗಳಿಗೆ ಸಾಲ ನೀಡಿ ಉತ್ತಮ ಸೇವೆ ನೀಡಿದೆ. ಹಾಗೆನೇ ಈ ಸಂಘವು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಂಸ್ಥೆಯಾಗಿ ಬೆಳಗಲಿ ಎಂದು ಹಾರೈಸಿದರು.
ಸಮಾರಂಭ ಅದ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಅವರು ಮಾತಾಡಿ ಸಂಘದ ನೂತನ ಕಟ್ಟಡವು ಸ್ಮರಣೀಯ ರೀತಿಯ ಕಟ್ಟಡ ವಾಗಿರಬೇಕು ಎಂದು ಸರ್ವ ಸದಸ್ಯರ ಆಶಯವಾಗಿತ್ತು. ಅದರಂತೆ ನಮ್ಮ ಎಲ್ಲಾ ಸದಸ್ಯರ ಸಹಕಾರ ದೊಂದಿಗೆ ನೂತನ ಕಟ್ಟಡ ಉದ್ಘಾಟನೆಯಾಗಿದೆ ಇದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.
ಸಮಾರಂಭದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಡಿ. ವೇದವ್ಯಾಸ ಕಾಮತ್, ಕರ್ನಾಟಕ ಬ್ಯಾಂಕ್ ಇದರ ಆಡಳಿತ ನಿರ್ದೇಶಕರು ಮಹಾಬಲೇಶ್ವರ ಎಂ. ಎಸ್., ಮಾಜಿ ಶಾಸಕರು ಜೆ. ಆರ್. ಲೋಬೊ, ನಿಟ್ಟೆ ವಿವಿ ಸಹಕುಲಪತಿ ಡಾ| ಎಂ. ಶಾಂತಾರಾಮ ಶೆಟ್ಟಿ, ಸಂಘದ ಉಪಾಧ್ಯಕ್ಷ ಕೆ.ದಿನೇಶ್ ರಾವ್ ಸಂಘದ ನಿರ್ದೇಶಕರಾದ ರಾಮಚಂದ್ರ ಕೆ., ಎಸ್., ಜೆ. ಕೃಷ್ಣಾನಂದ ರಾವ್, ಪಿ.ಬಾಬು, ಜೆ.ರವೀಂದ್ರ, ವಾರಿಜಾ ಕೆ., ಕೆ.ಎಸ್.ರಂಜನ್, ಡಾ| ಎಚ್. ಪ್ರಭಾಕರ್, ಡಾ| ಮಂಜುಳಾ ಎ.ರಾವ್, ಕೆ. ರವೀಂದ್ರ, ಜೈರಾಜ್ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎ. ಉಪಸ್ಥಿತರಿದ್ದರು.