ಉಳ್ಳಾಲ, ಎ.21 : ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್ ಎ.20, ಗುರುವಾರ ನಾಮಪತ್ರ ಸಲ್ಲಿಸಿದರು.
ಭಾರೀ ಮೆರವಣಿಗೆಯಲ್ಲಿ ತೆರಳಿದ ಯು.ಟಿ. ಖಾದರ್ ಅವರು ಉಳ್ಳಾಲ ನಗರಸಭೆ ಕಾರ್ಯಾಲಯದಲ್ಲಿರುವ ಕ್ಷೇತ್ರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ಅವರು ಸೋಮೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾ ಸಹಿತ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದರು. ಬಳಿಕ ಉಳ್ಳಾಲ ಬೈಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಯು.ಟಿ.ಖಾದರ್, ಇದು ಸತ್ಯ ಧರ್ಮದ, ಇದು ಜನವಿರೋದಿ, ತಾರತಮ್ಯ ಮಾಡುವ ಸರ್ಕಾರವನ್ನು ಕೆಳಗಿಸುವ ಚುನಾವಣೆಯಾಗಿದೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಮತ್ತೊಮ್ಮೆ ಗೆದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದರು.
ಸಮಾವೇಶದ ಬಳಿಕ ಅಬ್ಬಕ್ಕ ಸರ್ಕಲ್ ವರೆಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿದ ಯು.ಟಿ.ಖಾದರ್ ನಾಮಪತ್ರ ಸಲ್ಲಿಸಿದರು.
ಸಮಾವೇಶದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಇಬ್ರಾಹೀಂ ಕೋಡಿಜಾಲ್, ಡಾ.ಕಣಚೂರು ಮೋನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮುಖಂಡರಾದ ರಾಕೇಶ್ ಮಲ್ಲಿ, ಈಶ್ವರ್ ಉಳ್ಳಾಲ್, ಮಮತಾ ಡಿ.ಎಸ್.ಗಟ್ಟಿ, ಮುಹಮ್ಮದ್ ಮೋನು, ಅಶ್ರಫ್ ಕೆ.ಸಿ.ರೋಡ್, ಟಿಮುಸ್ತಫಾ ಹರೇಕಳ ಮತ್ತಿತರರು ಭಾಗವಹಿಸಿದ್ದರು.