ಕುಲಶೇಖರ,ಮೇ.27: ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಶ್ರೀ ವೀರನಾರಾಯಣ ದೇವರಿಗೆ 74 ವರ್ಷದ ಬಳಿಕ ಬ್ರಹ್ಮಕಲಶಾಭಿಷೇಕವು ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಬಿ. ಶ್ರೀಪಾದರು, ಮಾಣಿಲ ಶ್ರೀಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಮೇ.24,ಬುಧವಾರ ಬೆಳಗ್ಗೆ ಜರಗಿತು.
ಬುಧವಾರ ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ, ಹೋಮ ಕಲಶಾಭಿಷೇಕ, ತತ್ತ್ವಕಲಶಾಭಿಷೇಕ, ಪರಿಕಲಶಾಭಿಷೇಕಕ್ಕೆ ಉಡುಪಿಯ ಪೇಜಾವರ ಶ್ರೀ ಗಳ ಉಪಸ್ಥಿತಿಯಲ್ಲಿ ನಡೆಯಿತು.
ಪ್ರಾತಃ 8.05ರಿಂದ ಶ್ರೀ ವೀರನಾರಾಯಣ ದೇವರಿಗೆ ಬ್ರಹ್ಮಕಲಶಾಭಿಷೇಕ ಪ್ರಸನ್ನ ಪೂಜೆ, ಅವಸ್ರುತೋಕ್ಷಾ ಬಲಿ, ಮಹಾ ಮಂತ್ರಾಕ್ಷತೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಬಲಿ ಹೊರಟು ಉತ್ಸವ, ರಥೋತ್ಸವ, ಪಲ್ಲ ಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ಬಲಿ ಉತ್ಸವ, ರಥೋತ್ಸವ, ಪಲಕ್ಕಿ ಉತ್ಸವ, ವಸಂತ ಪೂಜೆ ನಡೆಯಿತು.ಈ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಹೆಚ್ಚಿಗೆ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು,
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಮಯೂರ್ ಉಳ್ಳಾಲ, ಪುರುಷೋತ್ತಮ ಕುಲಾಲ್ ಬಿ.ಪ್ರೇಮಾನಂದ ಕುಲಾಲ್, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬಯಿ ,ಸುಂದರ ಕುಲಾಲ್, ಸುನಿಲ್ ಆರ್. ಸಾಲ್ಯಾನ್ ಮುಂಬಯಿ, ದಿವಾಕರ ಮೂಲ್ಯ ಬೆಂಗಳೂರು, ಕೆ. ದಾಮೋದರ ವಿ. ಬಂಗೇರ, ಬಿ. ದಿನೇಶ್ ಕುಲಾಲ್ ಮುಂಬಯಿ, ಎಂ.ಪಿ. ಬಂಗೇರ ಬಿಜೈ ,ಮಾಧವ ಕುಲಾಲ್ ಬೆಂಗಳೂರು, ವಿವಿಧ ದಾನಿಗಳು, ಸಮಿತಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದರು.