ಉಡುಪಿ, ಜೂ. 14 : ಖ್ಯಾತ ಸ್ಯಾಕ್ಸೋಫೋನ್ ವಾದಕ, ಮತ್ತು ಸ್ಯಾಕ್ಸೋಫೋನ್ ಗುರು ಉಡುಪಿಯ ಅಲೆವೂರು ಮೂಲದ ಸುಂದರ ಸೇರಿಗಾರ (76) ಅವರು ಜೂ. 14, ಬುಧವಾರ ನಿಧನರಾಗಿದ್ದಾರೆ.
ಸುಂದರ ಸೇರಿಗಾರ ಅವರು ಇಂಟರ್ನ್ಯಾಷನಲ್ ವರ್ಚುವಲ್ ಪೀಸ್ ಯುನಿವರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಗೌರವವನ್ನು ಕೂಡಾ ಪಡೆದಿದ್ದರು.
ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಉತ್ಸವ ಸಂಧರ್ಭದಲ್ಲಿ ಸುಂದರ ಸೇರಿಗಾರ ಅವರು ಸೇವೆಯನ್ನು ನಡೆಸಿಕೊಡುತ್ತಿದ್ದರು.ಅವರ ಮೊಮ್ಮಗಳು ಪೂಜಾ ದೇವಾಡಿಗ ಮುಂಬಯಿಯಲ್ಲಿ ಖ್ಯಾತ ಸ್ಯಾಕ್ಸೋಫೋನಿಸ್ಟ್ ಆಗಿದ್ದಾರೆ.
ಸುಂದರ ಸೇರಿಗಾರ ಅವರು ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.