ನ್ಯೂಯಾರ್ಕ್, ಜೂ. 17: ಅಮೆರಿಕನ್ ನಟ ಅಲ್ ಪಸಿನೊ 83ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಇದುವರೆಗೂ ಮದುವೆಯಾಗಿರದ ಪೆಸಿನೋ ಅವರು 29 ವರ್ಷದ ಪ್ರಿಯತಮೆಯಿಂದ ಮಗುವನ್ನು ಪಡೆದಿದ್ದಾರೆ.
ಪೆಸಿನೋ ಅವರು 2022ರಲ್ಲಿ ಅಲ್ಫಲ್ಲಾಹ್ ಅವರನ್ನು ಭೇಟಿ ಮಾಡಿದ್ದು, ಆಗಿನಿಂದಲೇ ಇವರಿಬ್ಬರ ಮಧ್ಯೆ ಲವ್ ಶುರುವಾಗಿದೆ ಎನ್ನಲಾಗಿತ್ತು. ಅಲ್ಫಲ್ಲಾಹ್ ಅವರು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಮಗುವಿಗೆ ರೋಮನ್ ಪೆಸಿನೋ ಎಂದು ನಾಮಕರಣ ಮಾಡಿದ್ದಾರೆ. ಪೆಸಿನೋ ಅವರಿಗೆ ಇದು ನಾಲ್ಕನೇ ಮಗುವಾಗಿದೆ. ಇತರ ಇಬ್ಬರು ಪ್ರಿಯತಮೆಯರಿಂದ ಆಂಟೊನ್, ಒಲಿವಿಯಾ ಹಾಗೂ ಜೂಲಿ ಮಾರಿ ಎನ್ನುವ ಮೂರು ಮಕ್ಕಳನ್ನು ಪಡೆದಿದ್ದಾರೆ.