ಉಡುಪಿ, ಜು 06 : ಭಾರೀ ಮಳೆಗೆ ಕಮಲಶಿಲೆ ದೇವಳದ ಪಕ್ಕದಲ್ಲಿ ಉಕ್ಕಿ ಹರಿಯುತ್ತಿರುವ ಕುಬ್ಜಾ ನದಿಯಲ್ಲಿ ಮುಳುಗಿ ದೇವಾಲಯದ ಅರ್ಚಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ನಡೆದಿದೆ.
ಮೃತರನ್ನು ಕಮಲಶಿಲೆ ಸಮೀಪದ ತಪ್ಪಲು ನಿವಾಸಿ ಶೇಷಾದ್ರಿ ಐತಾಳ್ (75) ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ವರುಣನ ಅಬ್ಬರಕ್ಕೆ ಮೂರನೇ ಸಾವು ಸಂಭವಿಸಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.
1 Comment
Pingback: อะไหล่อุตสาหกรรม