ಕಾಸರಗೋಡು, ಜು. 09 : ಆಟೊ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದುಆಟೋ ಚಾಲಕ ಸಾವನಪ್ಪಿದ ಘಟನೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಮುದೆ ಬಳಿ ನಡೆದಿದೆ.
ಮೃತರನ್ನು ಚೇವಾರ್ ಮಿತ್ತಡ್ಕದ ಕಿಶೋರ್ ಯಾನೆ ಪ್ರಕಾಶ್ ಸಿ. ಎಚ್ (34) ಎಂದು ಗುರುತಿಸಲಾಗಿದೆ.
ಚೇವಾರ್ ನಲ್ಲಿ ಕಿಶೋರ್ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದು, ರವಿವಾರ ಬಾಡಿಗೆಗೆ ತೆರಳಿ ಮರಳುತ್ತಿದ್ದಾಗ ರಸ್ತೆ ಬದಿ ಇಡಲಾಗಿದ್ದ ಇಂಟರ್ ಲಾಕ್ ಗೆ ಬಡಿದು ರಿಕ್ಷಾ ಮಗುಚಿ ಬಿದ್ದಿದೆ. ರಿಕ್ಷಾದಡಿ ಸಿಲುಕಿದ್ದ ಕಿಶೋರ್ ನನ್ನು ನಾಗರಿಕರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.