ಬಾಂಗ್ಲಾದೇಶ, ಜು. 23: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್ ಕೆರೆಗೆ ಬಿದ್ದು 17 ಮಂದಿ ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದ ಝಲ್ಕಾತಿ ಜಿಲ್ಲೆಯಲ್ಲಿ ಸಂಭವಿಸಿದೆ.
ಈ ಬಸ್ 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಭಂಡಾರಿಯಾ ಉಪ ಜಿಲ್ಲೆಯಿಂದ ನೈಋತ್ಯ ವಿಭಾಗೀಯ ಪ್ರಧಾನ ಕಚೇರಿ ಬರಿಸಾಲ್ಗೆ ಎಂಬಲ್ಲಿಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದು 17 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ 17 ಶವ ಹೊರ ತೆಗೆಯಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಘಟನೆಯಲ್ಲಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.