ಕಾಸರಗೋಡು, ಜು, 28: ಮನೆ ಸಮೀಪದ ಆವರಣ ಇಲ್ಲದ ಬಾವಿಗೆ ಬಿದ್ದು ಪಾಕತಜ್ಞರೋರ್ವರು ಸಾವನ್ನಪ್ಪಿದ ಘಟನೆ ಪೆರ್ಲ ಸಮೀಪದ ಕಾಟುಕುಕ್ಕೆ ಕುಡ್ತಡ್ಕದಲ್ಲಿ ಗುರುವಾರ ನಡೆದಿದೆ. ಮೃತರನ್ನುಜನಾರ್ಧನ ನಾಯಕ್(42) ಎಂದು ಗುರುತಿಸಲಾಗಿದೆ.
ಸಂಜೆ ನೀರು ಸೇದಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ತವರು ಮನೆಗೆ ತೆರಳಿದ್ದ ಪತ್ನಿ ಮತ್ತು ಮಗು ಸಂಜೆ ಮನೆಗೆ ಬಂದಾಗ ಜನಾರ್ಧನ ನಾಪತ್ತೆಯಾಗಿದ್ದು, ಪರಿಸರ ವಾಸಿಗಳಿಗೆ ತಿಳಿಸಿದ್ದರು. ಹುಡುಕಟ ನಡೆಸಿದಾಗ ಬಾವಿಗೆ ಬಿದ್ದಿರುವುದು ಪತ್ತೆಯಾಗಿದೆ. ಪರಿಸರವಾಸಿಗಳು ಮತ್ತು ಮುಳುಗು ತಜ್ಞರ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆತ್ತಲಾಯಿತು ಎಂದು ವರದಿಯಾಗಿದೆ.